ಹರಿದ್ವಾರ(ಉತ್ತರಾಖಂಡ): ಭಾರತೀಯ ಜನತಾ ಪಾರ್ಟಿ ಶಾಸಕನೋರ್ವನ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು, ಎಫ್‌ಐಆರ್ ದಾಖಲಾಗಿದೆ. ಜ್ವಾಲಾಪುರ ಶಾಸಕ ಸುರೇಶ್ ರಾಥೋಡ್ ವಿರುದ್ಧ ಸೆಕ್ಷನ್ 370 ಅಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಇದೇ ಪ್ರಕರಣ ಸಂಬಂಧ ಶಾಸಕ ಕೂಡ ದೂರು ದಾಖಲಿಸಿದ್ದು, ಮಹಿಳೆ ಬ್ಲಾಕ್ಮೇಲ್ ಮಾಡ್ತಿದ್ದಾಳೆ ಎಂದಿದ್ದರು. ಜತೆಗೆ 36 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆಂದು ಹೇಳಿಕೊಂಡಿದ್ದರು. ಈಗಾಗಲೇ ಮಹಿಳೆಯನ್ನ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಶಾಸಕನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾಳೆ.