ಕರ್ನಾಟಕ

karnataka

ETV Bharat / bharat

158 ಸ್ಥಾನಗಳಲ್ಲಿ ಮುನ್ನಡೆ..149 ಸ್ಥಾನ ಗೆಲುವಿನ ಸಾರ್ವಕಾಲಿಕ ದಾಖಲೆ ಮುರಿಯುತ್ತಾ ಬಿಜೆಪಿ? - gujarat constituency wise result

1985 ರಲ್ಲಿ ಮಾಧವಸಿಂಹ ಸೋಲಂಕಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ 149 ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ನಿರ್ಮಿಸಿದ್ದ ದಾಖಲೆಯನ್ನು ಈ ಬಾರಿ ಬಿಜೆಪಿ ಮುರಿಯುವ ಸಾಧ್ಯತೆ ಇದೆ.

bjp-might-cross-an-all-time-record-of-149-seats
ಗೆಲುವಿನ ಸಾರ್ವಕಾಲಿಕ ದಾಖಲೆ ಮುರಿಯುತ್ತಾ ಬಿಜೆಪಿ

By

Published : Dec 8, 2022, 12:32 PM IST

ಗಾಂಧಿನಗರ:ಗುಜರಾತ್​ನಲ್ಲಿ ಸತತ 7ನೇ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವ ಎಲ್ಲ ಸಾಧ್ಯತೆ ಖಚಿತವಾಗಿದೆ. 1995 ರಿಂದ ಚುನಾವಣೆಯಲ್ಲಿ ಸೋಲನುಭವಿಸದ ಭಾರತೀಯ ಜನತಾ ಪಕ್ಷ ಸದ್ಯದ ಟ್ರೆಂಡ್​ ಪ್ರಕಾರ 182 ಕ್ಷೇತ್ರಗಳಲ್ಲಿ 158 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ 149 ಸ್ಥಾನಗಳ ಸಾರ್ವಕಾಲಿಕ ದಾಖಲೆಯನ್ನು ಮೀರಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ಗೆದ್ದರೆ ಎಡರಂಗದ ದಾಖಲೆ ಸಮ:ಗುಜರಾತ್ ವಿಧಾನಸಭೆಯ 182 ಕ್ಷೇತ್ರಗಳ ಪೈಕಿ ಬಹುಮತಕ್ಕೆ 92 ಸ್ಥಾನದ ಅಗತ್ಯವಿದೆ. ಬಿಜೆಪಿ ಸದ್ಯಕ್ಕೆ 158 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಕ್ಸಿಟ್ ಪೋಲ್‌ಗಳು ಸಹಿತ ಸತತ ಏಳನೇ ಅವಧಿಗೆ ಕೇಸರಿ ಪಡೆ ಆಯ್ಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಬಿಜೆಪಿ ಈ ಬಾರಿ ಗೆಲುವು ಸಾಧಿಸಿದ್ದೇ ಆದಲ್ಲಿ ಪಶ್ಚಿಮ ಬಂಗಾಳದಲ್ಲಿ ಎಡರಂಗದ ಸರ್ಕಾರದ 34 ವರ್ಷಗಳ ಆಡಳಿತವನ್ನು ಸರಿಗಟ್ಟಲಿದೆ. 27 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕೇಸರಿ ಪಡೆಗೆ ಈವರೆಗೂ ಇಂತಹ ಜನಾದೇಶ ಬಂದಿರಲಿಲ್ಲ.

ತನ್ನದೇ ದಾಖಲೆ ಪುಡಿ?:2002 ರ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ ಬಿಜೆಪಿ 127 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಅದಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ತನ್ನದೇ ದಾಖಲೆಯನ್ನು ಬಿಜೆಪಿ ಪುಡಿಗಟ್ಟಲಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರವರ್ಧಮಾನಕ್ಕೆ ಬಂದ ಮೇಲೆ ಕಾಂಗ್ರೆಸ್​ ರಾಜ್ಯದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ.

1985 ರಲ್ಲಿ ಮಾಧವಸಿಂಹ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪನೆ ಮಾಡಿತ್ತು. ಅದು ಐತಿಹಾಸಿಕ ಗೆಲುವಿನ ಮೂಲಕ. 182 ಸ್ಥಾನಗಳಲ್ಲಿ ಕಾಂಗ್ರೆಸ್​ ದಾಖಲೆಯ 149 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶೇಕಡಾವಾರು ಮತದಾನ 55 ಕ್ಕಿಂತ ಹೆಚ್ಚಿತ್ತು. ಇದನ್ನು ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳು ಮೀರಿಸಲು ಸಾಧ್ಯವಾಗಿಲ್ಲ. ಅದಾದ ಬಳಿಕ ಬಿಜೆಪಿ 1995 ರಿಂದ ಸತತವಾಗಿ ರಾಜ್ಯದಲ್ಲಿ ಗೆಲುವು ಸಾಧಿಸಿ ಭದ್ರಕೋಟೆ ಕಟ್ಟಿದೆ.

ಓದಿ:ಭಾರತ್​ ಜೋಡೋ ಯಾತ್ರೆ.. ರಾಹುಲ್​ ಗಾಂಧಿ ಮುಂದೆಯೇ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ ಯತ್ನ

ABOUT THE AUTHOR

...view details