ಲಖನೌ(ಉತ್ತರಪ್ರದೇಶ):ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣರ ಮತಗಳೇ ನಿರ್ಣಾಯಕವಾಗಲಿದ್ದು, ಹೀಗಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ದೆಹಲಿಯ ತಮ್ಮ ನಿವಾಸದಲ್ಲಿ ಪ್ರಚಾರಕ್ಕಾಗಿ ರಚಿಸಲಾಗಿರುವ ಬಿಜೆಪಿ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿದರು.
ಉತ್ತರಪ್ರದೇಶ ಚುನಾವಣೆಯಲ್ಲಿ ಬ್ರಾಹ್ಮಣ ಮತದಾರರನ್ನು ಓಲೈಸುವ ಮತ್ತು ಪಕ್ಷದ ಪ್ರಚಾರ ಜವಾಬ್ದಾರಿ ನೋಡಿಕೊಳ್ಳಲು ಬಿಜೆಪಿ ಭಾನುವಾರ ಸಮಿತಿಗಳನ್ನು ರಚಿಸಿದೆ. ಸಮಿತಿಯ ಸದಸ್ಯರು ತಮ್ಮ ಯೋಜನೆಗಳನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ನೀಲನಕ್ಷೆ ಅಂತಿಮಗೊಳಿಸಲು ಜೆಪಿ ನಡ್ಡಾ ಸಭೆ ಕರೆದಿದ್ದರು.