ಅಗರ್ತಲಾ:ತ್ರಿಪುರದ ಆಡಳಿತರೂಢ ಬಿಜೆಪಿಯ ನಾಯಕ ಕೃಪಾ ರಂಜನ್ ಚಕ್ಮಾ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಧಲೈ ಜಿಲ್ಲೆಯ ಮಾಣಿಕ್ಪುರದಲ್ಲಿ ಬಿಜೆಪಿ ಮುಖಂಡ ಕೃಪಾ ರಂಜನ್ ಚಕ್ಮಾ(35) ಮನೆಯ ಮೇಲೆ ಮೂವರು ಬಂದೂಕುಧಾರಿಗಳು ಶನಿವಾರ ಮುಂಜಾನೆ ದಾಳಿ ನಡೆಸಿ ಈ ಬುಡಕಟ್ಟು ನಾಯಕನನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.