ಕರ್ನಾಟಕ

karnataka

ETV Bharat / bharat

ಮಸೀದಿ ಹೊರಗೆ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ! - ದೆಹಲಿಯಲ್ಲಿ ಗುಂಡು ಹಾರಿಸಿ ಬಿಜೆಪಿ ಮುಖಂಡನ ಕೊಲೆ

ನಂದ್ ನಗರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಮಸೀದಿ ಹೊರಗೆ ಬಿಜೆಪಿ ಮುಖಂಡ ಮತ್ತು ಆರ್‌ಟಿಐ ಕಾರ್ಯಕರ್ತ ಜುಲ್ಫಿಕರ್ ಖುರೇಷಿ ಅವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.

Zulfiqar Qureshi
ಜುಲ್ಫಿಕರ್ ಖುರೇಷಿ

By

Published : Nov 23, 2020, 3:02 PM IST

ನವದೆಹಲಿ: ಈಶಾನ್ಯ ದೆಹಲಿಯ ಮಸೀದಿಯ ಹೊರಗೆ ಸೋಮವಾರ ಬೆಳಗ್ಗೆ ಸ್ಥಳೀಯ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ನಂದ್ ನಗರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಮಸೀದಿಯ ಹೊರಗೆ ಬಿಜೆಪಿ ಮುಖಂಡ ಮತ್ತು ಆರ್‌ಟಿಐ ಕಾರ್ಯಕರ್ತ ಜುಲ್ಫಿಕರ್ ಖುರೇಷಿ ಅವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮುಂಜಾನೆ ಪ್ರಾರ್ಥನೆಗಾಗಿ ಖುರೇಷಿ ತನ್ನ ಮಗನೊಂದಿಗೆ ಹತ್ತಿರದ ಮಸೀದಿಯತ್ತ ಹೊರಟಿದ್ದರು. ಅಪರಿಚಿತ ಹಲ್ಲೆಕೋರರು ತಂದೆ ಮೇಲೆ ಗುಂಡು ಹಾರಿಸಿ ಮಗನಿಗೂ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ದೂರು ನೀಡಲು ತೆರಳುತ್ತಿದ್ದಾಗ ಯುವತಿ ಮೇಲೆ ಅತ್ಯಾಚಾರ: ಇಬ್ಬರು ವಶಕ್ಕೆ

ಖುರೇಷಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಆತನ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.

ABOUT THE AUTHOR

...view details