ಕರ್ನಾಟಕ

karnataka

ETV Bharat / bharat

ಸ್ವ ಪಕ್ಷದ ನಾಯಕನಿಂದಲೇ ಪಿತೂರಿ: ಬಂಧಿತ ಬಿಜೆಪಿ ನಾಯಕಿ ಆರೋಪ - ಪೊಲೀಸ್ಟ ಕಸ್ಟಡಿಗೆ ಪಮೋಲಾ ಗೋಸ್ವಾಮಿ

ಕೊಕೇನ್ ಹೊಂದಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಬಿಜೆಪಿ ಯುವ ನಾಯಕಿ ಪಮೆಲಾ ಗೋಸ್ವಾಮಿ ಅವರನ್ನು ಫೆ.25ರವರೆಗೆ ಕೋರ್ಟ್ ಪೊಲೀಸ್ ಕಸ್ಟಡಿಗೆ ವಹಿಸಿದೆ.

ಜೆಪಿ ಯುವ ನಾಯಕಿ ಪಮೋಲಾ ಗೋಸ್ವಾಮಿ
ಜೆಪಿ ಯುವ ನಾಯಕಿ ಪಮೋಲಾ ಗೋಸ್ವಾಮಿ

By

Published : Feb 21, 2021, 4:33 AM IST

Updated : Feb 21, 2021, 9:46 AM IST

ಕೋಲ್ಕತಾ (ಪಶ್ಚಿಮ ಬಂಗಾಳ): ತನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಕೊಕೇನ್ ಹೊಂದಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಬಿಜೆಪಿ ಯುವ ನಾಯಕಿ ಪಮೆಲಾ ಗೋಸ್ವಾಮಿ ಆಗ್ರಹಿಸಿದ್ದಾರೆ.

ಪಮೆಲಾ ಅವರನ್ನು ಫೆ.25ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿ ಎನ್​ಡಿಪಿಎಸ್ ಕೋರ್ಟ್ ಆದೇಶ ಹೊರಡಿಸಿತು. ಆ ಬಳಿಕ ಕೋರ್ಟ್​ನಿಂದ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಾಗ ಗೋಸ್ವಾಮಿ ಕೂಗಾಡುತ್ತಾ, ಈ ಸಂಬಂಧ ಸಿಐಡಿ ತನಿಖೆ ಆಗಬೇಕು. ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯ್​ವರ್ಗೀಯಾ ಅವರ ಆಪ್ತ ಬಿಜೆಪಿ ನಾಯಕ ರಾಕೇಶ್ ಸಿಂಗ್ ಅವರ ಕೈವಾಡ ಇದ್ದು, ಆತನನ್ನು ಬಂಧಿಸುವಂತೆ ಗೋಸ್ವಾಮಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಕೇಶ್ ಸಿಂಗ್, ತೃಣಮೂಲ ಕಾಂಗ್ರೆಸ್ ಮತ್ತು ಕೋಲ್ಕತ್ತಾ ಪೊಲೀಸರು ಗೋಸ್ವಾಮಿ ಬ್ರೈನ್ ವಾಶ್​ ಮಾಡಿ, ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ದೂರಿದ್ದಾರೆ.

ವರ್ಷದಿಂದ ಗೋಸ್ವಾಮಿ ಜೊತೆ ಸಂಪರ್ಕದಲ್ಲಿಲ್ಲ ಮತ್ತು ಈ ಬಗ್ಗೆ ತನಿಖೆ ನಾನು ಸಿದ್ಧ ಎಂದು ಹೇಳಿದ್ದಾರೆ. ಇನ್ನು ಬಿಎಜಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

(ಕೊಕೇನ್ ಹೊಂದಿದ್ದ ಆರೋಪ: ಕೋಲ್ಕತ್ತಾದಲ್ಲಿ ಬಿಜೆಪಿ ಯುವನಾಯಕಿ ಬಂಧನ)

Last Updated : Feb 21, 2021, 9:46 AM IST

ABOUT THE AUTHOR

...view details