ಚೆನ್ನೈ (ತಮಿಳುನಾಡು): ಮೇ 13 ರಂದು (ನಾಳೆ) ಹೊರ ಬೀಳುವ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವು ಬಿಜೆಪಿ ಪಕ್ಷದ ಪರವಾಗಿರಲಿದ್ದು ಈ ಮೂಲಕ ಹರಿದಾಡುತ್ತಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಇಂದು ಚೆನ್ನೈನಲ್ಲಿ ಮಾತನಾಡಿದ ಅವರು, ಕರ್ನಾಟಕ ಬಿಜೆಪಿ ಪಕ್ಷ ನಾಳೆ ಎರಡು ಗೊಂದಲಗಳಿಗೆ ತೆರೆ ಎಳೆಯಲಿದೆ. ಈ ಮೂಲಕ ಇತಿಹಾಸ ಕೂಡ ಬರೆಯಲಿದೆ ಎಂದರು. ಒಂದನೇಯದಾಗಿ 1985ರ ನಂತರ, ಯಾವುದೇ ರಾಜಕೀಯ ಪಕ್ಷವು ಸತತವಾಗಿ ಕರ್ನಾಟಕದಲ್ಲಿ ಎರಡು ಬಾರಿ ಪುನಃ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ. ಎರಡನೇಯದಾಗಿ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಇಲ್ಲಿಯವರೆಗೆ ತಮ್ಮದೇ ಆದ 113 ಸೀಟ್ ಅನ್ನು ದಾಟಿಲ್ಲ.
ಇದನ್ನು ಓದಿ:ನಾಳೆ ಕೌಂಟಿಂಗ್ಗೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ: ಆರ್ಪಿಡಿ ಕಾಲೇಜು ಸುತ್ತ ಪೊಲೀಸ್ ಸರ್ಪಗಾವಲು..
ಆದರೆ, ನಾಳೆಯ ಫಲಿತಾಂಶದಲ್ಲಿ ರಾಜ್ಯ ಬಿಜೆಪಿ ಪಕ್ಷ ಈ ಎರಡು ವಿಭಾಗದಲ್ಲಿ ಅಚ್ಚರಿಯ ಫಲಿತಾಂಶ ನೀಡಲಿದೆ. ಈವರೆಗಿದ್ದ ಜಂಜಾಟಕ್ಕೆ ನಾಳೆಯ ಫಲಿತಾಂಶ ತೆರೆ ಎಳೆಯಲಿದೆ. ಬಿಜೆಪಿ ನಮ್ಮದೇ ಆದ 113 ಸೀಟ್ಗಳನ್ನು ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂಖ್ಯೆ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ. ಹೀಗಾಗಿ ನಮಗೆ ಯಾರ ಬೆಂಬಲವನ್ನು ಕೇಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.