ಅಲ್ವಾರ್ (ರಾಜಸ್ಥಾನ): ರಾಜಸ್ಥಾನದ ಅಲ್ವಾರ್‌ನ ಬಿಜೆಪಿ ನಾಯಕಿ ಚಾರುಲ್ ಅಗರ್ವಾಲ್ ಅವರಿಗೆ ಬೆದರಿಕೆ ಪತ್ರ ಬಂದಿದೆ. ಜ್ಞಾನವಾಪಿ ವಿವಾದದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಅವರಿಗೆ ಬೆದರಿಕೆ ಪತ್ರ ಕಳುಹಿಸಲಾಗಿದೆ. ಈಟಿವಿ ಭಾರತ್ ಜೊತೆ ಮಾತನಾಡಿದ ಚಾರುಲ್ ಅಗರ್ವಾಲ್, ಬೆದರಿಕೆ ಪತ್ರ ಬಂದ ಮಾತ್ರಕ್ಕೆ ನಾನು ಹೆದರಿಲ್ಲ. ಒಂಚೂರು ಅಸುರಕ್ಷಿತ ಭಾವನೆ ಉಂಟಾಗಿದ್ದು ನಿಜ. ಬೆಳಗ್ಗೆ 7.45 ರ ಸುಮಾರಿಗೆ ಮಕ್ಕಳೊಂದಿಗೆ ಇರುವಾಗ ನನ್ನ ಫ್ಲ್ಯಾಟ್ಗೆ ಬಂದಿರುವ ಲಕೋಟೆ ನೋಡಿದೆ. ಪತ್ರದ ಕವರ್ ಮೇಲೆ ನನ್ನ ಹೆಸರು, ದೂರವಾಣಿ ಸಂಖ್ಯೆ ಮತ್ತು ವಿಳಾಸ ಬರೆಯಲಾಗಿದೆ ಎಂದು ಹೇಳಿದರು.
ಪತ್ರದ ಸಾರಾಂಶದ ಬಗ್ಗೆ ಹೇಳುವುದಾದರೆ, ಗ್ಯಾನವಾಪಿ ಮಸೀದಿ ನಮ್ಮದು. ಮಸೀದಿ ಬಗ್ಗೆ ಹೇಳಿಕೆಗಳಿಂದ ನನಗೆ ತೊಂದರೆಯಾಗಲಿದೆ. ನನ್ನ ತಲೆ ಕತ್ತರಿಸಿ, ದೇಹವನ್ನು 56 ತುಂಡು ಮಾಡಲಾಗುವುದು. ಉದಯ್ಪುರದ ಕನ್ಹಯ್ಯಲಾಲ್ನಿಗೆ ಆದ ಗತಿಯೇ ನನಗೂ ಆಗಲಿದೆ. ಸೆಪ್ಟೆಂಬರ್ 25 ಕೊನೆಯ ದಿನವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಚಾರುಲ್ ತಿಳಿಸಿದರು.