ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆ ತೆಲಂಗಾಣ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಜಿ ಕಿಶನ್ ರೆಡ್ಡಿ ಅವರು ಜನಸೇನೆಯ ಮುಖಂಡ ಪವನ್ ಕಲ್ಯಾಣ್ ಮತ್ತು ಎನ್. ಮನೋಹರ್ ಅವರನ್ನು ಭೇಟಿ ಮಾಡಿದರು.
ಮುಂಬರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬಲಪಡಿಸಲು ಮತ್ತು ಅವರಿಗೆ ಬೆಂಬಲಿಸಲು ಬಿಜೆಪಿ-ಜನಸೇನೆ ಹೇಗೆ ಒಟ್ಟಾಗಿ ಕೆಲಸ ಮಾಡಬಹುದೆಂಬುದನ್ನು ನಾವು ಚರ್ಚಿಸಿದ್ದೇವೆ ಎಂದು ರೆಡ್ಡಿ ಟ್ವೀಟ್ ಮಾಡಿದ್ದಾರೆ.
ಡಿಸೆಂಬರ್ 1ರಂದು ಚುನಾವಣೆ ನಡೆಯಲಿದೆ ಎಂದು ತೆಲಂಗಾಣ ರಾಜ್ಯ ಚುನಾವಣಾ ಆಯುಕ್ತ (ಟಿಎಸ್‌ಇಸಿ) ಪಾರ್ಥಸಾರಥಿ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಬಿಜೆಪಿ ಹೈಕಮಾಂಡ್ ಸಹ ಉಸ್ತುವಾರಿಯಾಗಿ ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರನ್ನು ನೇಮಕ ಮಾಡಿದೆ.