ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಿಧ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಟಿಎಂಸಿಯಿಂದ ಕೆಲ ದೇಶದ್ರೋಹಿಗಳನ್ನು ಕರೆದುಕೊಂಡು ಬಿಜೆಪಿ ಸೋನಾರ್ ಬಾಂಗ್ಲಾ ಕಟ್ಟುವ ಕನಸು ಕಾಣುತ್ತಿದೆ. ಬಿಜೆಪಿಯ ಈ ಸೂತ್ರ ಯಶಸ್ವಿಯಾಗಲ್ಲ. ಬಿಜೆಪಿಗೆ ಹೋಗುವವರು ದಂಗೆಕೋರರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿಗೆ ಹೋಗುವವರು ಅಪಾರ ಹಣ ಸಂಪಾದನೆ ಮಾಡಿದ್ದು, ತಮ್ಮ ಆಸ್ತಿ ಮತ್ತು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಈ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.