ಕರ್ನಾಟಕ

karnataka

ETV Bharat / bharat

ಈ ವರ್ಷ ರಾಜಕೀಯ ಪಕ್ಷಗಳಿಗೆ ₹777 ಕೋಟಿ ದೇಣಿಗೆ.. ₹614 ಕೋಟಿ ಪಡೆದ ಬಿಜೆಪಿಯದ್ದೇ ಸಿಂಹಪಾಲು

ಬಿಜೆಪಿ, ಕಾಂಗ್ರೆಸ್​ ಸೇರಿದಂತೆ ದೇಶದ 7 ಪಕ್ಷಗಳು ವಿವಿಧ ಮೂಲಗಳಿಂದ ಒಟ್ಟಾರೆ 777.73 ಕೋಟಿ ರೂಪಾಯಿ ದೇಣಿಗೆ ಪಡೆದಿವೆ. ಇದರಲ್ಲಿ ಬಿಜೆಪಿಯದ್ದೇ ಸಿಂಹಪಾಲು 614 ಕೋಟಿ ರೂಪಾಯಿ ಪಡೆದರೆ, ಕಾಂಗ್ರೆಸ್​ 95 ಕೋಟಿ ಸ್ವೀಕರಿಸಿದೆ. ಕೇಂದ್ರ ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ಈ ಮಾಹಿತಿ ಇದೆ.

bjp-highest-donation
ಈ ವರ್ಷ ರಾಜಕೀಯ ಪಕ್ಷಗಳಿಗೆ ₹777 ಕೋಟಿ ದೇಣಿಗೆ

By

Published : Nov 30, 2022, 10:08 PM IST

ನವದೆಹಲಿ:ವಿವಿಧ ಸಂಘಸಂಸ್ಥೆಗಳು, ಶ್ರೀಮಂತರು, ದಾನಿಗಳಿಂದ ದೇಣಿಗೆಯಾಗಿ ವಿಶ್ವದ ಅತಿದೊಡ್ಡ ಪಕ್ಷವಾದ ಬಿಜೆಪಿ 614 ಕೋಟಿ ರೂಪಾಯಿ ಸ್ವೀಕರಿಸಿದೆ. ಇದು ಕಳೆದ ವರ್ಷಕ್ಕಿಂತಲೂ ಶೇ.29 ರಷ್ಟು ಹೆಚ್ಚಾಗಿದೆ. ಸ್ವಾತಂತ್ರ್ಯ ಕಾಲದ ಹಳೆಯ ಪಕ್ಷವಾದ ಕಾಂಗ್ರೆಸ್​ 2ನೇ ಅತ್ಯಧಿಕ ದೇಣಿಗೆಯಾಗಿ 95 ಕೋಟಿ ರೂಪಾಯಿ ಪಡೆದಿದೆ. ಆದರೆ, ಇದು ಕೇಸರಿ ಪಡೆಗಿಂತಲೂ 6 ಪಟ್ಟು ಕಡಿಮೆಯಾಗಿದೆ.

ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ರಾಷ್ಟ್ರದ 7 ವಿವಿಧ ರಾಜಕೀಯ ಪಕ್ಷಗಳು ದೇಣಿಗೆ ಪಡೆದ ಮಾಹಿತಿಯನ್ನು ಹಂಚಿಕೊಂಡಿವೆ. ಇದರಲ್ಲಿ ಕಾಂಗ್ರೆಸ್​ ಬಿಜೆಪಿಗಿಂತಲೂ ಕಡಿಮೆ ದೇಣಿಗೆ ಪಡೆದಿದೆ. ಮಾಯಾವತಿ ನೇತೃತ್ವದ ಬಿಎಸ್​ಪಿ ಶೂನ್ಯ ದೇಣಿಗೆ ಪಟ್ಟಿಯಲ್ಲಿದೆ.

ಅತಿಹೆಚ್ಚು ದೇಣಿಗೆ ಪಡೆದ ಬಿಜೆಪಿ ಆದಾಯ ಕಳೆದ ವರ್ಷಕ್ಕಿಂತಲೂ ಅಧಿಕವಾಗಿದೆ. 2021 ರಲ್ಲಿ 477 ಕೋಟಿ ರೂಪಾಯಿ ಹರಿದು ಬಂದಿತ್ತು. ಇದು ಈ ಬಾರಿ 614.53 ಕೋಟಿಗೆ ತಲುಪಿದೆ. 2ನೇ ಸ್ಥಾನದಲ್ಲಿರುವ ಕಾಂಗ್ರೆಸ್​ ಕಳೆದ ಬಾರಿ 74 ಕೋಟಿ ಪಡೆದರೆ, ಈ ಬಾರಿ 95.46 ಕೋಟಿ ರೂಪಾಯಿ ಪಡೆದು ಕೊಂಡಿದೆ.

ಬಿಎಸ್​ಪಿಗೆ ಅತಿ ಕಡಿಮೆ ದೇಣಿಗೆ:ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಂತೆ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ(ಬಿಎಸ್​ಪಿ) ಕೇವಲ 20 ಸಾವಿರ ರೂಪಾಯಿ ಮಾತ್ರ ಪಡೆದುಕೊಂಡಿದೆ. ಇದು ಸಾಮಾನ್ಯ ಜನರೇ ನೀಡಿದ ಅಲ್ಪಮೊತ್ತವಾಗಿದೆ.

ಇನ್ನುಳಿದಂತೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್​(ಟಿಎಂಸಿ) 43 ಲಕ್ಷ ರೂಪಾಯಿ, ಕೇರಳದ ಸಿಪಿಐ(ಎಂ) 10.5 ಕೋಟಿ, ಶರದ್​ ಪವಾರ್​ ನೇತೃತ್ವದ ಎನ್​ಸಿಪಿ 57.90 ಕೋಟಿ, ದೆಹಲಿ, ಪಂಜಾಬ್​ನಲ್ಲಿ ಸರ್ಕಾರ ನಡೆಸುತ್ತಿರುವ ಅರವಿಂದ್​​ ಕೇಜ್ರಿವಾಲ್​ ಅವರ ಆಮ್​ ಆದ್ಮಿ ಪಕ್ಷ(ಆಪ್​​) 44.54 ಕೋಟಿ ರೂಪಾಯಿ ದೇಣಿಗೆ ಪಡೆದಿದೆ. ಇದರಲ್ಲಿ ಅಕ್ಟೋಬರ್​ ತಿಂಗಳವರೆಗೂ 30.30 ಕೋಟಿ ಖರ್ಚಾಗಿರುವುದನ್ನು ಪಕ್ಷ ತೋರಿಸಿದೆ. ಸಿಪಿಐ ಇನ್ನೂ ಯಾವುದೇ ದೇಣಿಗೆಯ ಲೆಕ್ಕಾಚಾರ ನೀಡಿಲ್ಲ.

ದೇಶದಲ್ಲಿರುವ 8 ರಾಷ್ಟ್ರೀಯ ಪಕ್ಷಗಳು ಸೇರಿದಂತೆ ವಿವಿಧ ಪಕ್ಷಗಳು 2021-22 ರ ಸಾಲಿನಲ್ಲಿ ಒಟ್ಟಾರೆ 778.73 ಕೋಟಿ ರೂಪಾಯಿ ದೇಣಿಗೆಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿವೆ. ಬಿಜೆಪಿಗೆ 4,957 ದೇಣಿಗೆಗಳಿಂದ 614.52 ಕೋಟಿ ಬಂದರೆ, ಕಾಂಗ್ರೆಸ್ 1,257 ದೇಣಿಗೆಗಳಿಂದ 95.45 ಕೋಟಿ ರೂಪಾಯಿ ಪಡೆದಿದೆ. ಈ ಎರಡು ಪ್ರಮುಖ ರಾಜಕೀಯ ಪಕ್ಷಗಳು ಒಟ್ಟಾರೆ ದೇಣಿಗೆಯಲ್ಲಿ ಶೇ.90 ರಷ್ಟು ಪಾಲು ಹೊಂದಿವೆ.

ಓದಿ:ಆಟವಾಡಲು ಹೊರ ಬಂದ ಬಾಲಕನ ತಲೆ ಸೀಳಿ ಮೆದುಳು ತಿಂದು ಹಾಕಿದ ಬೀದಿ ನಾಯಿಗಳು!

ABOUT THE AUTHOR

...view details