ನವದೆಹಲಿ:ಮಹತ್ವದ ಬೆಳವಣಿಗೆವೊಂದರಲ್ಲಿ ಭಾರತೀಯ ಜನತಾ ಪಾರ್ಟಿ ಬರೋಬ್ಬರಿ 15 ರಾಜ್ಯಗಳ ಉಸ್ತುವಾರಿ ಘೋಷಣೆ ಮಾಡಿದ್ದು, ಪಕ್ಷವನ್ನ ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವರು, ಸಂಸದರಿಗೆ ಮಣೆ ಹಾಕಲಾಗಿದೆ. ಮುಖ್ಯವಾಗಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ, ತ್ರಿಪುರಾ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್, ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಮಹೇಶ್ ಶರ್ಮಾ ಸೇರಿದಂತೆ ಅನೇಕ ಬಿಜೆಪಿಯ ಹಿರಿಯ ನಾಯಕರಿಗೆ ವಿವಿಧ ರಾಜ್ಯಗಳ ಉಸ್ತುವಾರಿ ನೀಡಲಾಗಿದೆ.
ಬಿಜೆಪಿಯ ವಿನೋದ್ ತಾವ್ಡೆ ಬಿಹಾರ ಉಸ್ತುವಾರಿ, ಓಂ ಮಾಥುರ್ ಛತ್ತೀಸ್ಗಢ ಮತ್ತು ಮಂಗಲ್ ಪಾಂಡೆ ಪಶ್ಚಿಮ ಬಂಗಾಳದ ಉಸ್ತುವಾರಿಗಳಾಗಿ ನೇಮಕಗೊಂಡಿದ್ದಾರೆ.
ಮುಂದಿನ ಕೆಲ ದಿನಗಳಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಜೊತೆಗೆ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುವ ಬಿಜೆಪಿ ಹೈಕಮಾಂಡ್ 15 ರಾಜ್ಯಗಳಿಗೆ ಹೊಸ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಯಾರಿಗೆಲ್ಲ ಬಿಜೆಪಿ ಹೈಕಮಾಂಡ್ ಮಣೆ?
- ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೇರಳ ಉಸ್ತುವಾರಿ
- ವಿ. ಮುರಳೀದರ್ ರಾವ್: ಮಧ್ಯಪ್ರದೇಶ ಉಸ್ತುವಾರಿ, ಇವರಿಗೆ ಸಹಾಯಕರಾಗಿ ಪಂಕಜ್ ಮುಂಡೆ ಹಾಗೂ ಸಂಸದ ರಾಮಶಂಕರ್ ಕಟಾರಿ
- ಅರುಣ್ ಸಿಂಗ್: ರಾಜಸ್ಥಾನ ಉಸ್ತುವಾರಿ
- ಮಹೇಶ್ ಶರ್ಮಾ: ತ್ರಿಪುರಾ ಉಸ್ತುವಾರಿ
- ಲಕ್ಷದ್ವೀಪ: ರಾಧಾ ಮೋಹನ್ ಅಗರ್ವಾಲ್
- ಜಾರ್ಖಂಡ್: ಲಕ್ಷ್ಮೀ ಬಾಜಪೈ
- ಬಿಹಾರ: ವಿನೋದ್ ತಾವಡೆ
- ಹರಿಯಾಣ: ತ್ರಿಪುರಾ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇವ್
- ಪಂಜಾಬ್: ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ
- ಈಶಾನ್ಯ ರಾಜ್ಯಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಸಂಯೋಜಕ
- ತೆಲಂಗಾಣ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಗ್, ಅರವಿಂದ್ ಮೆನನ್ ಸಹಾಯಕ