ತಮಿಳುನಾಡು: ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯು ಮೂರನೇ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಟ್ವೀಟ್ಮಾಡಿದ್ದಾರೆ.
"@ಬಿಜೆಪಿ 4 ತಮಿಳುನಾಡು ಈ ಹಿಂದೆ ಜನಪ್ರತಿನಿಧಿಗಳಿಲ್ಲದ ಕ್ಷೇತ್ರಗಳಲ್ಲಿ ಇಂದು ಗೆಲುವು ಸಾಧಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಂತರ ನಾವು ಅಧಿಕೃತವಾಗಿ 3ನೇ ದೊಡ್ಡ ಪಕ್ಷವಾಗಿದ್ದೇವೆ. ನಮ್ಮ ಕೆಚ್ಚೆದೆಯ ಮತ್ತು ಶ್ರಮಜೀವಿಗಳ ಕಾರ್ಯಕರ್ತರಿಗೆ ಅವರ ನೆಲದ ಕೆಲಸಕ್ಕಾಗಿ ಮತ್ತು ಅವರ ಸ್ಫೂರ್ತಿಗಾಗಿ ನಮ್ಮ ಎಲ್ಲ ನಾಯಕರಿಗೆ ಪ್ರಾಮಾಣಿಕವಾಗಿ ಧನ್ಯವಾದಗಳು" ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಚೆನ್ನೈನಲ್ಲಿ ಬಿಜೆಪಿ ಒಂದು ವಾರ್ಡ್ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಉಮಾ ಆನಂದನ್ ವಾರ್ಡ್ 134 ರಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೊದಲು, ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಇದುವರೆಗೆ ಮೂರು ವಾರ್ಡ್‌ಗಳನ್ನು ಗೆದ್ದಿದೆ. ಇದರಲ್ಲಿ ತಿರುಪ್ಪೂರ್‌ನ ವಾರ್ಡ್ 9 ಸೇರಿದ್ದು, ಬಿಜೆಪಿ ಅಭ್ಯರ್ಥಿ 230 ಮತಗಳನ್ನು ಪಡೆದರೆ, ಡಿಎಂಕೆ ಅಭ್ಯರ್ಥಿ ಕೇವಲ 30 ಮತಗಳನ್ನು ಪಡೆಯುವ ಮೂಲಕ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ. ಕರೂರು ಜಿಲ್ಲೆಯಲ್ಲಿ ವಾರ್ಡ್ 3ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಅಭೂತಪೂರ್ವ ಗೆಲುವಿಗೆ ಕಾರಣರಾದ ತಮಿಳುನಾಡಿನ ಜನತೆಗೆ ಅಣ್ಣಾಮಲೈ ಧನ್ಯವಾದ ತಿಳಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲುವು ಪ್ರಧಾನಿ ನರೇಂದ್ರ ಮೋದಿ ಮೇಲೆ ಜನತೆ ಇಟ್ಟಿರುವ ನಂಬಿಕೆ ಮತ್ತು ಪ್ರೀತಿ ತೋರಿಸುತ್ತಿದೆ ಎಂದಿದ್ದಾರೆ.