ನವದೆಹಲಿ: ಬಡವರ ಭಾರತ ಹಾಗೂ ಶ್ರೀಮಂತರ ಭಾರತ ಹೀಗೆ ಎರಡು ವಿಭಿನ್ನ ಭಾರತಗಳನ್ನು ಬಿಜೆಪಿ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅಂಬುಜಾ ಸಿಮೆಂಟ್ ಹಾಗೂ ಎಸಿಸಿ ಸಿಮೆಂಟ್ ಕಂಪನಿಗಳಲ್ಲಿನ 6.38 ಬಿಲಿಯನ್ ಡಾಲರ್ ಮೊತ್ತದ ಹೋಲ್ಸಿಮ್ ಶೇರ್ ಅನ್ನು ಅದಾನಿ ಗ್ರೂಪ್ ಯಾವುದೇ ತೆರಿಗೆ ಪಾವತಿಸದೇ ಸ್ವಾಧೀನಪಡಿಸಿಕೊಳ್ಳುತ್ತದೆ. ಅದೇ ಸಮಯಕ್ಕೆ ತಮ್ಮ ಪಾಲಿನ ಒಂದು ಹೊತ್ತಿನ ಪೌಷ್ಟಿಕ ಆಹಾರ ಪಡೆಯಲು ಬಡ ಮಕ್ಕಳು ಆಧಾರ್ ಕಾರ್ಡ್ ತೋರಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ.