ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶದಲ್ಲಿ 37 ವರ್ಷಕ್ಕೇರಿದ ಕಾಂಗ್ರೆಸ್​ ವನವಾಸ - ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ ಧೂಳೀಪಟ

ಯುಪಿಯಲ್ಲಿ ಕಾಂಗ್ರೆಸ್​ ನಂತರ ಹಲವು ಸರ್ಕಾರಗಳು ರಚನೆಯಾಗಿದ್ದವು. ಆದರೆ, ಯಾವುದೇ ಪಕ್ಷ ನಿರಂತರವಾಗಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಯುಪಿಯಲ್ಲಿ 37 ವರ್ಷಕ್ಕೆ ಏರಿಕೆಯಾದ ಕಾಂಗ್ರೆಸ್​ ವನವಾಸ
ಯುಪಿಯಲ್ಲಿ 37 ವರ್ಷಕ್ಕೆ ಏರಿಕೆಯಾದ ಕಾಂಗ್ರೆಸ್​ ವನವಾಸ

By

Published : Mar 10, 2022, 10:48 PM IST

ಉತ್ತರ ಪ್ರದೇಶದಲ್ಲಿ ಒಂದೆಡೆ 37 ವರ್ಷಗಳ ನಂತರ ಬಿಜೆಪಿ ಅಧಿಕಾರದಲ್ಲಿ ಮುಂದುವರಿದ ಇತಿಹಾಸ ಸೃಷ್ಟಿಸಿದರೆ, ಇನ್ನೊಂದೆಡೆ ಕಾಂಗ್ರೆಸ್ ವನವಾಸ 32 ವರ್ಷದಿಂದ 37 ವರ್ಷಕ್ಕೆ ಏರಿಕೆಯಾಗಿದೆ.

ಭಾರತೀಯ ಜನತಾ ಪಕ್ಷವು ನಿರ್ಮಾಣ ಮಾಡಿದ ಇತಿಹಾಸವು 1980 ಮತ್ತು 1985ರಲ್ಲಿ ಕಾಂಗ್ರೆಸ್ ಪಕ್ಷವು ಸಾಧಿಸಿದ್ದ ಇತಿಹಾಸವನ್ನು ನೆನಪಿಸಿದೆ.

ಯುಪಿಯಲ್ಲಿ ಕಾಂಗ್ರೆಸ್​ ನಂತರ ಹಲವು ಸರ್ಕಾರಗಳು ರಚನೆಯಾಗಿದ್ದವು. ಆದರೆ, ಯಾವುದೇ ಪಕ್ಷವು ನಿರಂತರವಾಗಿ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರೆಲ್ಲಾ ಅಧಿಕಾರದ ಗದ್ದುಗೆಯನ್ನು ತ್ಯಜಿಸಬೇಕಾಯಿತು. ಆದರೆ ಭಾರತೀಯ ಜನತಾ ಪಕ್ಷವು ಈ ವ್ಯವಸ್ಥೆಯನ್ನು ಮುರಿದಿದೆ.

ಬಿಜೆಪಿ 2017ರಲ್ಲಿ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಈಗ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುತ್ತಿದೆ. ಈ ಮೂಲಕ ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೆ ಬರಲು ಇನ್ನೂ ಐದು ವರ್ಷಗಳು ಕಾಯುವುದರ ಜೊತೆಗೆ ಭಾರಿ ಹೋರಾಟವನ್ನೇ ಮಾಡಬೇಕಿದೆ.

ಇದನ್ನೂ ಓದಿ: ಹತ್ತು ವರ್ಷದಲ್ಲೇ ಬದಲಾದ ಮನ್ ಹಣೆಬರಹ: ಪಂಜಾಬ್​ ಸಿಎಂ ಗದ್ದುಗೆ ಏರಲಿದ್ದಾರೆ ಕಾಮಿಡಿಯನ್!

1980ರ ಚುನಾವಣೆಯಲ್ಲಿ ಕಾಂಗ್ರೆಸ್ 425 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ವೇಳೇ 309 ಅಭ್ಯರ್ಥಿಗಳು ಗೆದ್ದಿದ್ದರು. ಆಗ ರಾಜ್ಯದಲ್ಲಿ ಚಲಾವಣೆಯಾಗಿದ್ದ ಶೇ.37.76 ಮತಗಳನ್ನು ಕಾಂಗ್ರೆಸ್ ಪಡೆದುಕೊಂಡಿತ್ತು. ಇದಾದ ನಂತರ 1985ರ ಚುನಾವಣೆಯಲ್ಲೂ ಕಾಂಗ್ರೆಸ್ 425 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ 269 ಅಭ್ಯರ್ಥಿಗಳು ಗೆದ್ದಿದ್ದರು. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಕಾಂಗ್ರೆಸ್ ಶೇ.39.25ರಷ್ಟು ಮತಗಳನ್ನು ಪಡೆದಿತ್ತು.

ಇದಾದ ನಂತರ 2017ರಲ್ಲಿ ಭಾರತೀಯ ಜನತಾ ಪಕ್ಷ ಕೂಡ 312 ಸ್ಥಾನಗಳನ್ನು ಗೆದ್ದಿತ್ತು. ಈಗ 2022 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸುಮಾರು 273 ಸ್ಥಾನಗಳನ್ನು ಗೆದ್ದಿದೆ.

ABOUT THE AUTHOR

...view details