ನಲ್ಗೊಂಡ:ಜಿಲ್ಲೆಯ ನಾಗಾರ್ಜುನಸಾಗರ್ ಉಪಚುನಾವಣೆ ಕಾವು ಬಲು ಜೋರಾಗಿ ನಡೆಯುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹೊಸ - ಹೊಸ ಪ್ರಯತ್ನಗಳೇ ನಡೆಸುತ್ತಲೆ ಇದ್ದಾರೆ. ಇಲ್ಲೊಬ್ಬ ಅಭ್ಯರ್ಥಿ ಮತಕ್ಕಾಗಿ ಕಣ್ಣೀರನ್ನೇ ಸುರಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರವಿ ಕುಮಾರ್ ತಮ್ಮ ತವರು ಗ್ರಾಮವಾದ ತ್ರಿಪುರಾರಂ ತಾಲೂಕಿನ ಪಾಲ್ಗುತಾಂಡಾದಲ್ಲಿ ಪ್ರಚಾರ ಕೈಗೊಂಡಿದ್ದರು. ಈ ವೇಳೆ, ಗ್ರಾಮದ ಜನರ ಎದರು ಮತ ಕೇಳುವಾಗ ಅವರು ಭಾವುಕರಾಗಿದ್ದರು. ಪ್ರಚಾರದ ಭಾಷಣದಲ್ಲಿ ಮಾತನಾಡುವಾಗ ಕಣ್ಣೀರು ಹಾಕುತ್ತಲೇ ಮತಯಾಚಿಸಿದರು.