ನಾಡಿಯಾಡ್(ಗುಜರಾತ್): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಾದ ಡಿಜಿಟಲ್ ಇಂಡಿಯಾವನ್ನು ಗುಜರಾತ್ ಚುನಾವಣೆಯಲ್ಲಿ ಅವರದೇ ಪಕ್ಷದ ಅಭ್ಯರ್ಥಿ ಭರ್ಜರಿಯಾಗಿ ಬಳಕೆ ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ರೋಬೋಟ್ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಅದರಿಂದಲೇ ಜನರ ಬಳಿ ತೆರಳಿ ಮತ ಕೇಳುತ್ತಿದ್ದಾರೆ.
ಗುಜರಾತ್ನ ಖೇಡಾ ಜಿಲ್ಲೆಯ ನಾಡಿಯಾಡ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಂಕಜಭಾಯ್ ದೇಸಾಯಿ ಅವರು ರೋಬೋ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿದ್ದಾರೆ. ಬಿಜೆಪಿಯ ಪಂಕಜಭಾಯ್ ದೇಸಾಯಿ ಅವರು ನಾಡಿಯಾಡ್ ವಿಧಾನಸಭಾ ಕ್ಷೇತ್ರದಿಂದ ಆರನೇ ಬಾರಿಗೆ ಸ್ಪರ್ಧಿಗೆ ಇಳಿದಿದ್ದಾರೆ. ಈ ಬಾರಿ ಪ್ರಚಾರಕ್ಕೆ ನಾನಾ ಆಧುನಿಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಭರವಸೆಗಳುಳ್ಳ ಕರಪತ್ರಗಳನ್ನು ರೋಬೋ ಮೂಲಕವೇ ಜನರಿಗೆ ಹಂಚಲಾಗುತ್ತಿದೆ.