ನವದೆಹಲಿ: ಐದು ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವ ಮೂಲಕ ರೈತರ ಧ್ವನಿಯನ್ನು ಹತ್ತಿಕ್ಕಿದ್ದಕ್ಕಾಗಿ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರದ ಮೇಲೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಮೂರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಹರಿಯಾಣದ ಕರ್ನಾಲ್ನಲ್ಲಿ ಮಿನಿ-ಸೆಕ್ರೆಟರಿಯೇಟ್ (ಜಿಲ್ಲಾಧಿಕಾರಿ ಇರುವ ಕಚೇರಿ) ಮುತ್ತಿಗೆ ಯತ್ನ ಮಾಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆಗಸ್ಟ್ 28ರಂದು ನಡೆದ ಘಟನೆ. ಅಂದು ಪ್ರತಿಭಟನಾನಿರತ ರೈತರ ಮೇಲೆ ಜಿಲ್ಲಾಧಿಕಾರಿ ಪೊಲೀಸರಿಗೆ ಲಾಠಿಬೀಸುವ ಆದೇಶ ನೀಡಿರುವ ಜೊತೆಗೆ, ಪ್ರತಿಭಟನಾನಿರತ ತಲೆತೆಗೆಯುವ ಬಗ್ಗೆ ಹೇಳಿದ್ದರು ಎಂದು ರೈತ ಮುಖಂಡರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡುವಂತೆ ರೈತ ಸಂಘಟನೆಗಳು ಒತ್ತಾಯಿಸುತ್ತಿವೆ.
ಇದರ ಭಾಗವಾಗಿ ಇಂದು ಮಿನಿ-ಸೆಕ್ರೆಟರಿಯೇಟ್‌ವರೆಗೆ ದೊಡ್ಡಸಂಖ್ಯೆಯಲ್ಲಿ ಆಗಮಿಸಿದ ರೈತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.