ಕರ್ನಾಟಕ

karnataka

ETV Bharat / bharat

ಸತತ ಏಳು ಬಾರಿ ಗೆದ್ದ ಎಡರಂಗದ ದಾಖಲೆ ಸರಿಗಟ್ಟಿದ ಬಿಜೆಪಿ!

1977ರಲ್ಲಿ ಪಶ್ಚಿಮ ಬಂಗಾಳದಲ್ಲಿ ಎಡರಂಗದ ಸರಕಾರ ಅಧಿಕಾರಕ್ಕೆ ಬಂದಿತ್ತು ಮತ್ತು 2011ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರುವವರೆಗೆ 34 ವರ್ಷಗಳ ಕಾಲ ರಾಜ್ಯ ಆಳಿತ್ತು. ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ತ್ರಿಪುರಾದಲ್ಲಿಯೂ ಎಡರಂಗ 19 ವರ್ಷಗಳ ಕಾಲ ಆಡಳಿತ ನಡೆಸಿದ್ದು, ಮಾಣಿಕ್ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ದಾರೆ.

ಹೊಸ ದಾಖಲೆ: ದೇಶದಲ್ಲಿ ಸತತವಾಗಿ ಅತಿ ಹೆಚ್ಚು ಅವಧಿಗೆ ಅಧಿಕಾರದಲ್ಲಿರುವ ಪಕ್ಷ ಬಿಜೆಪಿ!
bjp-becomes-the-longest-serving-political-party-in-the-country

By

Published : Dec 8, 2022, 3:22 PM IST

Updated : Dec 8, 2022, 4:28 PM IST

ಗುಜರಾತ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬಿಜೆಪಿ ಸತತ ಏಳು ಬಾರಿ ಗೆದ್ದ ಎಡರಂಗದ ದಾಖಲೆಯನ್ನು ಸರಿಗಟ್ಟಿದೆ. ಗುಜರಾತ್​ನಲ್ಲಿ ಬಿಜೆಪಿ ಈ ಬಾರಿಯೂ ತನ್ನ ಪೂರ್ಣಾವಧಿಯನ್ನು ಪೂರ್ಣಗೊಳಿಸಿದರೆ ಭಾರತದಲ್ಲಿ ಅತಿಹೆಚ್ಚು ದೀರ್ಘಾವಧಿಗೆ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷವಾಗಲಿದೆ.

1990 ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು ಮತ್ತು ಅಂದಿನಿಂದ ಕಳೆದ 32 ವರ್ಷಗಳಿಂದ ಕೇಸರಿ ಬ್ರಿಗೇಡ್ ಜನಾದೇಶ ಪಡೆಯುತ್ತಿದೆ. 2022ರ ಗೆಲುವು ಪಶ್ಚಿಮ ಬಂಗಾಳದಲ್ಲಿ ಎಡರಂಗದ ದಾಖಲೆಯನ್ನು ಸರಿಗಟ್ಟುವ ಸತತ ಏಳನೇ ಅವಧಿಯ ಗೆಲುವು ಮಾತ್ರವಲ್ಲ, ಬಿಜೆಪಿ ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದರೆ ಪಕ್ಷವು ಪಶ್ಚಿಮ ಬಂಗಾಳದಲ್ಲಿ 34 ವರ್ಷ ಆಡಳಿತ ನಡೆಸಿದ ಎಡರಂಗದ ದಾಖಲೆಯನ್ನು ಮುರಿಯುತ್ತದೆ. ಈ ಮೂಲಕ 37 ವರ್ಷಗಳ ಕಾಲ ಸತತ ಸರ್ಕಾರ ನಡೆಸಿ ಹೊಸ ದಾಖಲೆ ನಿರ್ಮಿಸಲಿದೆ.

1977ರಲ್ಲಿ ಪಶ್ಚಿಮ ಬಂಗಾಳದಲ್ಲಿ ಎಡರಂಗದ ಸರಕಾರ ಅಧಿಕಾರಕ್ಕೆ ಬಂದಿತ್ತು ಮತ್ತು 2011ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರುವವರೆಗೆ 34 ವರ್ಷಗಳ ಕಾಲ ರಾಜ್ಯ ಆಳಿತ್ತು. ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ತ್ರಿಪುರಾದಲ್ಲಿಯೂ ಎಡರಂಗ 19 ವರ್ಷಗಳ ಕಾಲ ಆಡಳಿತ ನಡೆಸಿದ್ದು, ಮಾಣಿಕ್ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ದಾರೆ.

ಎಡರಂಗದ ದಾಖಲೆ ಸರಿಗಟ್ಟಿದ ಬಿಜೆಪಿ

ಇಷ್ಟೇ ಅಲ್ಲ, ಮೋದಿ ಮತ್ತು ಅವರ ಬ್ರಿಗೇಡ್ ರಾಜ್ಯದಲ್ಲಿ ಈ ಹಿಂದೆ ಯಾವುದೇ ರಾಜಕೀಯ ಪಕ್ಷ ಗಳಿಸದಷ್ಟು ಗರಿಷ್ಠ ಸ್ಥಾನಗಳನ್ನು ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ. 1985 ರಲ್ಲಿ ಮಾಜಿ ಮುಖ್ಯಮಂತ್ರಿ ಮಾಧವ್ ಸಿಂಗ್ ಸೋಲಂಕಿ ನೇತೃತ್ವದ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದುಕೊಂಡಿತ್ತು, ಇದು ಇಲ್ಲಿಯವರೆಗೆ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷವು ಗೆದ್ದ ಅತಿ ಹೆಚ್ಚು ಸ್ಥಾನವಾಗಿದೆ.

ಇಲ್ಲಿಯವರೆಗೆ ಬಿಜೆಪಿ 127 ಸ್ಥಾನಗಳನ್ನು ಗಳಿಸಿದೆ ಮತ್ತು ಇನ್ನೂ 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, 155 ರ ಗಡಿಯತ್ತ ದಾಪುಗಾಲು ಹಾಕುತ್ತಿದೆ. ಬಿಜೆಪಿ 155 ತಲುಪಿದರೆ, ಇದು ರಾಜ್ಯದ ರಾಜಕೀಯ ಪಕ್ಷವೊಂದರ ಅತಿದೊಡ್ಡ ವಿಜಯವಾಗಲಿದೆ.

ರಾಜ್ಯವೊಂದರಲ್ಲಿ ದೀರ್ಘಕಾಲ ಆಳಿದ ಹಲವಾರು ರಾಜಕೀಯ ಪಕ್ಷಗಳಿವೆ. ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಪವನ್ ಕುಮಾರ್ ಚಾಮ್ಲಿಂಗ್ ಮುಖ್ಯಮಂತ್ರಿಯಾಗಿ 24 ವರ್ಷಗಳ ಕಾಲ ಸಿಕ್ಕಿಂ ಆಳಿದ್ದಾರೆ. ಒಡಿಶಾದ ನವೀನ್ ಪಟ್ನಾಯಕ್ ಅವರು ಸತತ ಐದನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಗೆಗಾಂಗ್ ಅಪಾಂಗ್ ಅರುಣಾಚಲ ಪ್ರದೇಶವನ್ನು 22 ವರ್ಷಗಳಿಗೂ ಹೆಚ್ಚು ಕಾಲ ಆಳಿದ್ದಾರೆ.

ಇದನ್ನೂ ಓದಿ: ಗುಜರಾತ್ ಫಲಿತಾಂಶ ನೋಡಿ ರಾಜ್ಯದಲ್ಲಿ 12 ಶಾಸಕರು ಬಿಜೆಪಿ ಸೇರಲಿದ್ದಾರೆ: ಸಚಿವ ಆರ್​ ಅಶೋಕ್

Last Updated : Dec 8, 2022, 4:28 PM IST

ABOUT THE AUTHOR

...view details