ನವದೆಹಲಿ: ಮೂರು ಲೋಕಸಭಾ ಹಾಗೂ 16 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಳಿಗಾಗಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಎಲ್ಲ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಮತದಾನ ನಡೆಯಲಿದೆ.
ಕರ್ನಾಟಕದ ಸಿಂದಗಿ ಉಪ ಚುನಾವಣೆಯಿಂದ ಅಭ್ಯರ್ಥಿಯಾಗಿ ರಮೇಶ್ ಭೂಸನೂರು ಹಾನಗಲ್ನಿಂದ ಶಿವರಾಜ್ ಸಜ್ಜನರ್ ಅಭ್ಯರ್ಥಿಗಳಾಗಿ ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ.
ದಾದ್ರಾ ನಗರ ಹವೇಲಿ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶದ ಮೂರು ಲೋಕಸಭೆ ಕ್ಷೇತ್ರ ಹಾಗೂ ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಆದರೆ, ಬಿಜೆಪಿ ಇದೀಗ ಕೆಲವೊಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದೆ.
ಮಧ್ಯಪ್ರದೇಶದ ಖಾಂಡ್ವಾ ಕ್ಷೇತ್ರಕ್ಕಾಗಿ ಜ್ಞಾನೇಶ್ವರ್ ಪಾಟೀಲ್ ಅಭ್ಯರ್ಥಿಯಾಗಿದ್ದು, ಹಿಮಾಚಲ ಪ್ರದೇಶದ ಮಂಡಿಗೆ ಬ್ರಿಗೇಡಿಯರ್ ಖುಶಾಲ್ ಠಾಕೂರ್ ದಾದ್ರಾ ಮತ್ತು ನಗರ ಹವೇಲಿ ಲೋಕಸಭಾ ಕ್ಷೇತ್ರದಿಂದ ಮಹೇಶ್ ಗವಿತ್ ಅಭ್ಯರ್ಥಿಯಾಗಿದ್ದಾರೆ.
ಅಶೋಕೆ ಮೊಂಡಲ್, ನಿರಂಜನ್ ಬಿಸ್ವಾಸ್, ಜಾಯ್ ಸಾಹಾ ಮತ್ತು ಪಲಾಶ್ ರಾಣಾ ಪಶ್ಚಿಮ ಬಂಗಾಳದ ದಿನ್ಹಾಟಾ, ಶಾಂತಿಪುರ್, ಖರ್ದಹಾ ಮತ್ತು ಗೋಸಾಬ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದು, ಶಿಶುಪಾಲ್ ಸಿಂಗ್ ಯಾದವ್, ಪ್ರತಿಮಾ ಬಾಗ್ರಿ ಮತ್ತು ಸುಲೋಚನಾ ರಾವತ್ ಕ್ರಮವಾಗಿ ಮಧ್ಯಪ್ರದೇಶದ ಪೃಥ್ವಿಪುರ್, ರಾಯಗಾಂವ್ ಹಾಗೂ ಜೋಬತ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಆಂಧ್ರಪ್ರದೇಶದ ಬದ್ವೇಲ್ ಕ್ಷೇತ್ರದಿಂದ ಪುಂತಲಾ ಸುರೇಶ್, ಹರಿಯಾಣದ ಎಲ್ಲೆನಾಬಾದ್ನಿಂದ ಗೋವಿಂದ್ ಕಂದ್ ಸ್ಪರ್ಧೆ ಮಾಡ್ತಿದ್ದಾರೆ. ಬಲದೇವ್ ಠಾಕೂರ್, ರತನ್ ಸಿಂಗ್ ಪಾಲ್ ಮತ್ತು ನೀಲಂ ಸರಾಯಿಕ್ ಹಿಮಾಚಲ ಪ್ರದೇಶದ ಫತೇಪುರ್, ಅರ್ಕಿ ಮತ್ತು ಜಬ್ಬಲ್- ಕೊಟ್ಖಾಯ್ ಕ್ಷೇತ್ರದ ಅಭ್ಯರ್ಥಿಗಳಾಗಿದ್ದಾರೆ.
ಇದನ್ನೂ ಓದಿರಿ:BJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ, ವರುಣ್, ಮನೇಕಾ ಗಾಂಧಿಗೆ ಕೊಕ್, ರಾಜ್ಯದಿಂದ ಇವರಿಗೆಲ್ಲ ಸ್ಥಾನ!
ರಾಜಸ್ಥಾನದ ವಲ್ಲಭನಗರ ಮತ್ತು ಧರಿಯವಾಡ ಕ್ಷೇತ್ರದಿಂದ ಹಿಮ್ಮತ್ ಸಿಂಗ್ ಜಾಲ್ ಮತ್ತು ಖೇತ್ ಸಿಂಗ್ ಮೀನಾ ಅಭ್ಯರ್ಥಿಗಳಾಗಿದ್ದಾರೆ. ಈ ಎಲ್ಲ ಕ್ಷೇತ್ರಗಳಿಗೆ ಸೆಪ್ಟೆಂಬರ್ 28ರಂದು ದೇಶದ 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೂರು ಲೋಕಸಭೆ ಹಾಗೂ 30 ವಿಧಾನಸಭೆ ಸ್ಥಾನಗಳಿಗೆ ಉಪಚುನಾವಣೆ ಘೋಷಣೆ ಮಾಡಿದೆ.
ನಾಮಪತ್ರ ಸಲ್ಲಿಕೆ ಮಾಡಲು ಅಕ್ಟೋಬರ್ 8 ಕೊನೆಯ ದಿನವಾಗಿದ್ದು, ಅಕ್ಟೋಬರ್ 11 ನಾಮಪತ್ರಗಳ ಪರಿಶೀಲನೆ, ನಾಮಪತ್ರ ಹಿಂಪಡೆದುಕೊಳ್ಳಲು ಅಕ್ಟೋಬರ್ 13 ನಿಗದಿಯಾಗಿದ್ದು, ಮತದಾನ ಅಕ್ಟೋಬರ್ 30ರಂದು ನಡೆಯಲಿದೆ. ನವೆಂಬರ್ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.