ಮೋರಿಗಾಂವ್ (ಅಸ್ಸಾಂ):ಮುಸ್ಲಿಂ ಪುರುಷರು ಬಹು ಪತ್ನಿಯರನ್ನು ಹೊಂದುವುದನ್ನು ತಮ್ಮ ಪಕ್ಷ ಬಿಜೆಪಿ ವಿರೋಧಿಸುತ್ತದೆ ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಮತ್ತು ಲೋಕಸಭೆಯ ಸಂಸದ ಬದ್ರುದ್ದೀನ್ ಅಜ್ಮಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶರ್ಮಾ, ಎಐಯುಡಿಎಫ್ ಮುಖ್ಯಸ್ಥರ ಸಲಹೆಯ ಪ್ರಕಾರ ಮಹಿಳೆಯರು 20 ರಿಂದ 25 ಮಕ್ಕಳಿಗೆ ಜನ್ಮ ನೀಡಬಹುದು. ಆ ಎಲ್ಲ ಮಕ್ಕಳ ಆಹಾರ, ಬಟ್ಟೆ, ಶಿಕ್ಷಣ ಹೀಗೆ ಭವಿಷ್ಯದ ಎಲ್ಲ ಖರ್ಚು ವೆಚ್ಚವನ್ನು ಅಜ್ಮಲ್ ಅವರೇ ಭರಿಸಬೇಕಾಗುತ್ತದೆ ಎಂದು ಹೇಳಿದರು.
ಸ್ವತಂತ್ರ ಭಾರತದಲ್ಲಿ ವಾಸಿಸುವ ಪುರುಷನೊಬ್ಬ ಹಿಂದಿನ ಸಂಗಾತಿಗೆ ವಿಚ್ಛೇದನ ನೀಡದೇ ಮೂರು - ನಾಲ್ಕು ಮಹಿಳೆಯರನ್ನು ಮದುವೆಯಾಗುವ ಯಾವುದೇ ಹಕ್ಕಿಲ್ಲ. ನಾವು ಅಂಥ ವ್ಯವಸ್ಥೆಯನ್ನು ಬದಲಾಯಿಸಲು ಬಯಸುತ್ತೇವೆ. ನಾವು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಅಧಿಕೃತ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಶರ್ಮಾ ಹೇಳಿದರು.
ನಮಗೆ 'ಸಬ್ಕಾ ಸಾಥ್ ಸಬ್ಕಾ ವಿಕಾಸ್' ಬೇಕು. ಅಸ್ಸಾಮಿ ಹಿಂದೂ ಕುಟುಂಬಗಳ ವೈದ್ಯರಿದ್ದರೆ, ಮುಸ್ಲಿಂ ಕುಟುಂಬಗಳ ವೈದ್ಯರೂ ಇರಬೇಕು. 'ಪೋಮುವಾ' ಮುಸ್ಲಿಮರ ಮತ ಬೇಕಾಗಿರುವುದರಿಂದ ಅನೇಕ ಶಾಸಕರು ಅಂಥ ಸಲಹೆಯನ್ನು ನೀಡುವುದಿಲ್ಲ ಎಂದು ಶರ್ಮಾ ಇದೇ ವೇಳೆ ಶರ್ಮಾ ಸ್ಪಷ್ಟಪಡಿಸಿದರು.
ಪೊಮುವಾ ಮುಸ್ಲಿಮರು ಎಂದರೆ ಯಾರು?:ಪೂರ್ವ ಬಂಗಾಳ ಅಥವಾ ಇಂದಿನ ಬಾಂಗ್ಲಾದೇಶದಲ್ಲಿ ಹುಟ್ಟಿದ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಅಸ್ಸೋಂನಲ್ಲಿ ಆಡು ಮಾತಿನಲ್ಲಿ 'ಪೊಮುವಾ ಮುಸ್ಲಿಮರು' ಎಂದು ಕರೆಯಲಾಗುತ್ತದೆ. ಮಹಿಳೆಯರ ಬಗ್ಗೆ ಅಜ್ಮಲ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಮಾತನಾಡಿದ ಮುಖ್ಯಮಂತ್ರಿ, ಅಸ್ಸೋಂನಲ್ಲಿ ಬದ್ರುದ್ದೀನ್ ಅಜ್ಮಲ್ ಅವರಂಥ ಕೆಲ ನಾಯಕರಿದ್ದಾರೆ.
ಮಹಿಳೆಯರು ಫಲವತ್ತಾದ ಭೂಮಿ ಎನ್ನುವ ಇಂಥ ನಾಯಕರು, ಮಹಿಳೆಯರು ಆದಷ್ಟು ಬೇಗ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಹೇಳುತ್ತಾರೆ. ಆದರೆ ಮಹಿಳೆಯ ಹೆರಿಗೆ ಪ್ರಕ್ರಿಯೆಯನ್ನು ಹೊಲದೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಸಿಎಂ ಶರ್ಮಾ ಇದೇ ವೇಳೆ ತಿಳಿಸಿದರು. ಕುಟುಂಬವೊಂದು ತಾನು ತನ್ನ ಎಷ್ಟು ಮಕ್ಕಳಿಗೆ ಆಹಾರ, ಬಟ್ಟೆ ಮತ್ತು ಶಿಕ್ಷಣ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಸಾಧ್ಯವಿದೆಯೋ ಅಷ್ಟೇ ಮಕ್ಕಳನ್ನು ಹೊಂದಬೇಕು ಎಂದು ಶರ್ಮಾ ಹೇಳಿದರು.
ನಮ್ಮ ನೀತಿ ಸ್ಪಷ್ಟವಾಗಿದೆ;ನಮ್ಮ ಸರ್ಕಾರದ ನೀತಿ ಸ್ಪಷ್ಟವಾಗಿದೆ. ನಾವು ಸ್ಥಳೀಯರಿಗಾಗಿ ಕೆಲಸ ಮಾಡುತ್ತೇವೆ. ಆದರೆ, ನಾವು ಎಲ್ಲರ ಪ್ರಗತಿಯನ್ನು ಬಯಸುತ್ತೇವೆ. ಮುಸ್ಲಿಮರು, ವಿಶೇಷವಾಗಿ 'ಪೋಮುವಾ' ಮುಸ್ಲಿಮರು ಮದ್ರಸಾಗಳಲ್ಲಿ ಓದುವುದು ಮತ್ತು 'ಜೋನಾಬ್' ಮತ್ತು 'ಇಮಾಮ್ ಆಗುವುದು ನಮಗೆ ಇಷ್ಟವಿಲ್ಲ ಎಂದರು.
ಬಿಜೆಪಿ ನೇತೃತ್ವದ ಸರ್ಕಾರವು ಎಲ್ಲ ಮುಸ್ಲಿಂ ಮಕ್ಕಳು ಸಾಮಾನ್ಯ ಶಾಲಾ - ಕಾಲೇಜುಗಳಿಗೆ ಸೇರಬೇಕು ಎಂದು ಬಯಸುತ್ತದೆ ಮತ್ತು ಅವರು ವೈದ್ಯ ಮತ್ತು ಇಂಜಿನಿಯರ್ ಆಗಬೇಕೆಂದು ಬಯಸುತ್ತದೆ. ಡಿಸೆಂಬರ್ 2 ರಂದು ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಜ್ಮಲ್, 'ಲವ್ ಜಿಹಾದ್' ಕುರಿತು ಮುಖ್ಯಮಂತ್ರಿಗಳ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಮಹಿಳೆಯರು ಮತ್ತು ಹಿಂದೂ ಪುರುಷರು ಮತ್ತು ಶರ್ಮಾ ಬಗ್ಗೆ ಕಮೆಂಟ್ ಮಾಡಿದ್ದರು.
ಮೌಲಾನಾ ಎಂದು ಗುರುತಿಸಿಕೊಂಡಿರುವ ಧುಬ್ರಿ ಸಂಸದ ಅಜ್ಮಲ್, ಹಿಂದೂಗಳು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಬೇಕು ಮತ್ತು ಅವರೂ ಮುಸ್ಲಿಮರಂತೆ ಬಹಳಷ್ಟು ಮಕ್ಕಳನ್ನು ಹೆರಬೇಕು ಎಂದಿದ್ದರು. ಆದರೆ, ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಅಜ್ಮಲ್ ತನ್ನ ಕ್ಷಮೆಯಾಚನೆ ಮಾಡಿದ್ದರು. ಆದಾಗ್ಯೂ ತಮ್ಮ ಹೇಳಿಕೆಯನ್ನು ತಿರುಚಿ ಹೇಳಲಾಗಿದೆ ಮತ್ತು ತಾವು ಯಾವುದೇ ಧರ್ಮದ ವಿರುದ್ಧ ಹೇಳಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದರು.
ಇದನ್ನೂ ಓದಿ:ಮೂರು ಮದುವೆಯಾಗಿರುವ ವೃದ್ಧ.. ಕೋರ್ಟ್ ಮೆಟ್ಟಿಲೇರಿದ ಮೊದಲ ಪತ್ನಿಗೆ ನ್ಯಾಯಾಲಯ ಹೇಳಿದ್ದಿಷ್ಟೇ..