ಕರ್ನಾಟಕ

karnataka

ETV Bharat / bharat

ವಿದ್ಯುತ್ ಪೂರೈಸ್ತಿರೋದು ಉತ್ತರಾಖಂಡ, ಬಿಲ್​ ನೀಡುವುದು ಯುಪಿ ಸರ್ಕಾರ! ಅರೆರೆ, ಏನಿದ್ರ ಅಸಲಿ ಕಥೆ? - ಉತ್ತರಪ್ರದೇಶದ ರಾಂಪುರ

2018 ರಲ್ಲಿ ಉತ್ತರ ಪ್ರದೇಶ ವಿದ್ಯುತ್ ಇಲಾಖೆ ಅಧಿಕಾರಿಗಳು ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್​ಫಾರ್ಮರ್​ಗಳನ್ನು ಅಳವಡಿಸಿದರು. ಆದರೆ, ಈವರೆಗೆ ವಿದ್ಯುತ್ ಮಾತ್ರ ಪೂರೈಸುತ್ತಿಲ್ಲ. ಹಾಗಾಗಿ ಉತ್ತರಾಖಂಡ ಸರ್ಕಾರ ವಿದ್ಯುತ್ ಪೂರೈಸುತ್ತಿದೆ. ಆದರೆ, ಇಲ್ಲಿನ ನಿವಾಸಿಗಳು ಎರಡೂ ರಾಜ್ಯಗಳಿಂದ ವಿದ್ಯುತ್ ಬಿಲ್​​ ಪಡೆಯುತ್ತಾರೆ ಅನ್ನೋದೇ ಅಚ್ಚರಿಯ ಸಂಗತಿ.

ಯುಪಿ ಸರ್ಕಾರ
ಯುಪಿ ಸರ್ಕಾರ

By

Published : Mar 30, 2021, 10:45 PM IST

ರಾಂಪುರ (ಯುಪಿ): ಉತ್ತರಪ್ರದೇಶ ಮತ್ತು ಉತ್ತರಾಖಂಡದ ಗಡಿಯಲ್ಲಿರುವ ರಾಂಪುರ ಹಾಗೂ ರಾಜ್​ಪುರ ಗ್ರಾಮಕ್ಕೆ ಈವರೆಗೆ ವಿದ್ಯುತ್​ ಸಂಪರ್ಕವಿಲ್ಲ. ಉತ್ತರಪ್ರದೇಶದ ಸರ್ಕಾರ ವಿದ್ಯುತ್ ಪೂರೈಸದ ಕಾರಣ, ಉತ್ತರಾಖಂಡ ಸರ್ಕಾರ ಇಲ್ಲಿನ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

2018 ರಲ್ಲಿ ಉತ್ತರ ಪ್ರದೇಶ ವಿದ್ಯುತ್ ಇಲಾಖೆ ಅಧಿಕಾರಿಗಳು ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್​ಫಾರ್ಮರ್​ಗಳನ್ನು ಅಳವಡಿಸಿದರು. ಆದರೆ, ಈವರೆಗೆ ವಿದ್ಯುತ್ ಮಾತ್ರ ಪೂರೈಸುತ್ತಿಲ್ಲ. ಹಾಗಾಗಿ ಉತ್ತರಾಖಂಡ ಸರ್ಕಾರ ವಿದ್ಯುತ್ ಪೂರೈಸುತ್ತಿದೆ. ಆದರೆ, ಇಲ್ಲಿನ ನಿವಾಸಿಗಳು ಎರಡೂ ರಾಜ್ಯಗಳಿಂದ ವಿದ್ಯುತ್ ಬಿಲ್​​ ಪಡೆಯುತ್ತಾರೆ ಅನ್ನೋದೇ ಅಚ್ಚರಿಯ ಸಂಗತಿ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಲ್ಲಿನ ನಿವಾಸಿ ಸುಖ್​ವಿಂದರ್​ಸಿಂಗ್, ಉತ್ತರಪ್ರದೇಶ ಸರ್ಕಾರ ಕೇವಲ ಲೈಟ್​​ ಕಂಬಗಳನ್ನು ನಿರ್ಮಿಸಿದೆ. ಆದರೆ, ಉತ್ತರಾಖಂಡ ಸರ್ಕಾರ ನಮಗೆ ವಿದ್ಯುತ್ ಪೂರೈಸುತ್ತಿದೆ. ವಿದ್ಯುತ್ ಸರಬರಾಜು ಮಾಡದೆ ಯುಪಿ ಸರ್ಕಾರ ನಮ್ಮ ಮನೆಗಳಿಗೆ ಮೀಟರ್ ಅಳವಡಿಸಿ, ಬಿಲ್ ನೀಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಗಂಡನ ಮುಂದೆ ಹೆಂಡ್ತಿ ಮೇಲೆ ಗ್ಯಾಂಗ್​​ರೇಪ್​; ಚಿನ್ನಾಭರಣ, ನಗದು ದೋಚಿ ಪರಾರಿ!

ರಾಂಪುರ್​ ವಿದ್ಯುತ್ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಇಮ್ರಾನ್​​ ಪ್ರತಿಕ್ರಿಯಿಸಿ, ನಾನು ಅಧಿಕಾರಿಗಳ ಜತೆ ಮಾತನಾಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಹೇಳಿದ್ದಾರೆ. ತನಿಖೆಯ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಾವು ಯಾರ ಮೇಲೂ ಆರ್ಥಿಕವಾಗಿ ಶೋಷಣೆ ಎಸಗಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details