ಫರಿದಾಬಾದ್(ಹರಿಯಾಣ): ನುಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿಗೆ ಬುಧವಾರ ನುಹ್ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಜಾಮೀನು ಪಡೆದ ನಂತರ ಬಿಟ್ಟು ಬಜರಂಗಿ ಬುಧವಾರ ಸಂಜೆ ಫರಿದಾಬಾದ್‌ನ ನೀಮ್ಕಾ ಜೈಲಿನಿಂದ ಬಿಡುಗಡೆಯಾದರು. ಜೈಲಿನಿಂದ ಹೊರಬಂದ ಬಿಟ್ಟು ಬಜರಂಗಿ ಅವರನ್ನು ಬೆಂಬಲಿಗರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಪೊಲೀಸರು ಮಾಡಿರುವ ಆರೋಪವನ್ನು ಬಿಟ್ಟು ಬಜರಂಗಿ ನಿರಾಕರಿಸಿದ್ದಾರೆ.
ಫರಿದಾಬಾದ್ ನೀಮ್ಕಾ ಜೈಲಿನಿಂದ ಹೊರಬಂದ ಬಜರಂಗಿ ಮಾತನಾಡಿ, ನನ್ನನ್ನು ಆಗಸ್ಟ್ 17 ರಂದು ನೀಮ್ಕಾ ಜೈಲಿಗೆ ಕಳುಹಿಸಲಾಯಿತು. ಇಂದು ನನಗೆ ಜಾಮೀನು ಸಿಕ್ಕಿತು. ನನ್ನ ವಿರುದ್ಧ ವಿಧಿಸಿರುವ ಸೆಕ್ಷನ್‌ಗಳು ತಪ್ಪು ಎಂದು ಹೇಳಿದ್ದಾರೆ. ಪೊಲೀಸ್ ಆಡಳಿತದ ಕ್ರಮದಿಂದಾಗಿ ನಾನು ಜೈಲಿನೊಳಗೆ ಹೋಗಿದ್ದೆ. ಆದರೆ ನನಗೆ ಜಾಮೀನು ಸಿಕ್ಕಿದೆ. ನಂತರ ಮೊದಲಿನಂತೆ ಗೋಸಂರಕ್ಷಣೆ ಮತ್ತು ಧರ್ಮದ ಒಳಿತಿಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನುಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿ ತನ್ನನ್ನು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ನಾಯಕ ಎಂದು ಕರೆದುಕೊಳ್ಳುತ್ತಿದ್ದಾರೆ. ಆದರೆ ಅವರು ಹಿಂಸಾಚಾರದ ಆರೋಪದ ಮೇಲೆ ಜೈಲಿಗೆ ಹೋದ ನಂತರ ವಿಶ್ವ ಹಿಂದೂ ಪರಿಷತ್ ಅವರಿಂದ ದೂರವಾಯಿತು. ಬಿಟ್ಟು ಬಜರಂಗಿಗೆ ಬಜರಂಗದಳ ಅಥವಾ ವಿಎಚ್‌ಪಿಗೆ ಯಾವುದೇ ಸಂಬಂಧವಿಲ್ಲ ಎಂದು ವಿಎಚ್‌ಪಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಬಜರಂಗದಳದ ಕಾರ್ಯಕರ್ತ ಎಂದು ಬಣ್ಣಿಸಲಾಗುತ್ತಿರುವ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ಬಜರಂಗದಳದೊಂದಿಗೆ ಯಾವುದೇ ಸಂಬಂಧವಿರಲಿಲ್ಲ ಎಂದು ಹೇಳಲಾಗಿದೆ.