ಕೊಟ್ಟಾಯಂ (ಕೇರಳ): ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಗಳಿಂದ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮುಕ್ತಗೊಳಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿ ಗೋಪಕುಮಾರ್ ಅವರು ಫ್ರಾಂಕೊ ಮುಲಕ್ಕಲ್ ಮೇಲಿದ್ದ ಆರೋಪಗಳನ್ನು ರದ್ದುಗೊಳಿಸಿದರು. ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಖುದ್ದಾಗಿ ಬಿಷಪ್ ಫ್ರಾಂಕೋ ಹಾಜರಾಗಿದ್ದರು. ತೀರ್ಪು ಆಲಿಸಿದ ಅವರು ಬಳಿಕ ಪ್ರಕರಣದ ಬಗ್ಗೆ ತೀವ್ರ ಅಳಲು ತೋಡಿಕೊಂಡರು. ತಾವು ದೇವರಿಗೆ ಕೃತಜ್ಞನಾಗಿದ್ದೇನೆ, ಸತ್ಯವು ಅಂತಿಮವಾಗಿ ಮೇಲುಗೈ ಸಾಧಿಸುತ್ತದೆ ಎಂದು ನಾನು ಯಾವಾಗಲೂ ನಂಬುತ್ತೇನೆ ಎಂದು ಸಂತಸವನ್ನು ಹಂಚಿಕೊಂಡರು.