ಕೊಟ್ಟಾಯಂ( ಕೇರಳ):ಜಿಲ್ಲೆಯ ಎರಡು ಪಂಚಾಯತ್ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಈ ಹಿನ್ನೆಲೆ ಪಂಚಾಯತ್ ಪ್ರದೇಶದ ಸುತ್ತಮುತ್ತಲಿನ ಒಂದು ಕಿ.ಮೀ ವ್ಯಾಪ್ತಿ ಒಳಗಿರುವ 8000 ಬಾತುಕೋಳಿ, ಕೋಳಿ ಮತ್ತಿತ್ತರ ಸಾಕು ಪಕ್ಷಗಳ ಕೊಲ್ಲುವುದಕ್ಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಅರ್ಪೂಕರ ಮತ್ತು ತಲಯಜಾಮ್ ಪಂಚಾಯತ್ಗಳಲ್ಲಿ ಹಕ್ಕಿ ಜ್ವರ ಹಾಕಿಸಿಕೊಂಡಿದ್ದು, ಪರಿಸ್ಥಿತಿ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿ ಪಿಕೆ ಜಯಶ್ರೀ ನೇತೃತ್ವದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಲಾಗಿದೆ. ಸಭೆಯಲ್ಲಿ ಹಕ್ಕಿಜ್ವರಕ್ಕೆ ಒಳಗಾಗಿರುವ ಒಂದು ಕಿ.ಮೀ ವ್ಯಾಪಿಯಲ್ಲಿನ ಪಕ್ಷಿಗಳ ಕೊಲ್ಲುವುದಕ್ಕೆ ಪಶುಸಂಗೋಪನಾ ಇಲಾಖೆ ಅಧಿಕಾರ ನೇತೃತ್ವದಲ್ಲಿ ಸೂಚನೆ ನೀಡಲಾಗಿದೆ. ಜೊತೆಗೆ ಸೋಂಕಿಗೆ ತುತ್ತಾಗದ ಗ್ರಾಮಗಳಲ್ಲೂ ಮುನ್ನೆಚ್ಚರಿಕೆ ವಹಿಸುವಂತೆ ಪ್ರಕಟಣೆ ಹೊರಡಿಸಲಾಗಿದೆ.
ಹಕ್ಕಿ ಜ್ವರ ಬಾಧಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯೊಳಗೆ ಮುಂದಿನ ಮೂರು ದಿನಗಳ ಕಾಲ ಅಂದರೆ, ಡಿಸೆಂಬರ್ 13ರವರೆಗೆ ಕೋಳಿ, ಬಾತುಕೋಳಿ, ಇತರ ಸಾಕು ಪಕ್ಷಿ, ಮೊಟ್ಟೆ, ಮಾಂಸವನ್ನು ಮಾರಾಟ ಮತ್ತು ಸರಬರಾಜು ಮಾಡದಂತೆ ತಿಳಿಸಲಾಗಿದೆ. ಜೊತೆಗೆ, ಹಕ್ಕಿ ಜ್ವರ ಬಾಧಿತ ಪ್ರದೇಶ ಸೇರಿದಂತೆ 10 ಕಿಮೀ ವ್ಯಾಪ್ತಿಯಲ್ಲಿ ಕೋಳಿ, ಬಾತುಕೋಳಿ, ಇತರ ಸಾಕು ಪಕ್ಷಿಗಳ ಅಸಹಜ ಸಾವು ಕಂಡು ಬಂದರೂ ಹತ್ತಿರದ ಪಶು ವೈದ್ಯಕೀಯ ಆಸ್ಪತ್ರೆಗೆ ತಿಳಿಸುವಂತೆ ಸೂಚಿಸಲಾಗಿದೆ.
ವಲಸೆ ಪಕ್ಷಿಗಳಲ್ಲಿ ಎಚ್5ಎನ್1 ಸೋಂಕು ಕಂಡು ಬಂದಿರುವ ಕುರಿತು ಗಮನಿಸುವಂತೆ ತಿಳಿಸಲಾಗಿದೆ. ಇನ್ನು ಅರ್ಪೂಕರ ಮತ್ತು ತಲಯಜಾಮ್ ಪಂಚಾಯತ್ಗಳಲ್ಲಿ ಸಾವನ್ನಪ್ಪಿದ ಪಕ್ಷಿಗಳ ಮಾದರಿಗಳನ್ನು ಭೋಪಾಲ್ನ ಲ್ಯಾಬ್ಗೆ ಕಳುಹಿಸಲಾಗಿದ್ದು, ಹಕ್ಕಿಜ್ವರ ಇರುವುದು ದೃಢಪಟ್ಟಿದೆ.
ಇದನ್ನೂ ಓದಿ: ಕೇರಳದಲ್ಲಿ ಹಕ್ಕಿ ಜ್ವರ: 20 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳ ಹತ್ಯೆಗೆ ಕಾರ್ಯಾಚರಣೆ