ಥಾಣೆ(ಮಹಾರಾಷ್ಟ್ರ):ಇದ್ದಕ್ಕಿದ್ದಂತೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕೋಳಿಗಳು ಪೌಲ್ಟ್ರಿ ಫಾರ್ಮ್ನಲ್ಲಿ ಸಾವನ್ನಪ್ಪಿವೆ. ಅವುಗಳ ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಥಾಣೆ ಜಿಲ್ಲಾಧಿಕಾರಿ ರಾಜೇಶ್ ಜೆ.ನಾರ್ವೆಕರ್ ಶುಕ್ರವಾರ ಮಾಹಿತಿ ನೀಡಿದ್ದಾರೆ.
ಥಾಣೆಯ ಶಹಾಪುರ ತಾಲೂಕಿನ ವೆಹ್ಲೊಲಿ ಗ್ರಾಮ ಪೌಲ್ಟ್ರಿ ಫಾರ್ಮ್ನಲ್ಲಿ ಕೋಳಿಗಳು ಸಾವನ್ನಪ್ಪಿವೆ. ಈ ಘಟನೆ ನಡೆದ ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್ ಸುತ್ತಲಿನ ಪ್ರದೇಶಗಳ ಪೌಲ್ಟ್ರಿಫಾರ್ಮ್ಗಳಲ್ಲಿರುವ ಸುಮಾರು 25 ಸಾವಿರ ಕೋಳಿಗಳನ್ನು ಕೊಲ್ಲಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.