ನವದೆಹಲಿ:ಕೊರೊನಾ ವೈರಸ್ ಕಡಿಮೆಯಾಗ್ತಿದ್ದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದ್ದು, ಇದರ ಆತಂಕದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋಳಿ ಮಾಂಸ ಮಾರಾಟದ ಮೇಲೆ ನಿರ್ಬಂಧ ಹಾಕಲಾಗಿದೆ.
ಉತ್ತರ ಹಾಗೂ ದಕ್ಷಿಣ ದೆಹಲಿ ಪಾಲಿಕೆ ವ್ಯಾಪ್ತಿಯಲ್ಲಿನ ಕೆಲವೊಂದು ಪ್ರದೇಶಗಳಲ್ಲಿ ಕೋಳಿ ಹಾಗೂ ಅದರ ಮಾಂಸ ಮಾರಾಟದ ಜತೆಗೆ ಸಾಗಾಟಕ್ಕೂ ನಿರ್ಬಂಧ ಹಾಕಲಾಗಿದೆ. ಇದರ ಜತೆಗೆ ಅಲ್ಲಿನ ಹೋಟೆಲ್ಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಬರುವ ಗ್ರಾಹಕರಿಗೆ ಚಿಕನ್ ಆಹಾರ ನೀಡದಂತೆ ತಿಳಿಸಲಾಗಿದೆ. ಅರ್ಧ ಬೇಯಿಸಿದ ಅಥವಾ ಹುರಿದ ಮೊಟ್ಟೆ ಹಾಗೂ ಅರ್ಧ ಬೇಯಿಸಿದ ಕೋಳಿ ತಿನ್ನಬಾರದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.