ಕರ್ನಾಟಕ

karnataka

ETV Bharat / bharat

Madhulika Rawat: ಸಹಾಯಹಸ್ತದ ಸಂಕೇತವಾಗಿದ್ದರು ಬಿಪಿನ್ ರಾವತ್ ಪತ್ನಿ ಮಧುಲಿಕಾ - ಮಧುಲಿಕಾ ರಾವತ್ ಸಹಾಯಹಸ್ತ

ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಅವರು ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ (AWWA) ಸಂಸ್ಥೆಯ ಅಧ್ಯಕ್ಷೆಯಾಗಿದ್ದರು. ಈ ಮೂಲಕ ಸೇನಾ ಸಿಬ್ಬಂದಿಯ ಪತ್ನಿಯರು, ಮಕ್ಕಳ ಕಲ್ಯಾಣಕ್ಕಾಗಿ ಅನೇಕ ಜನಪರ ಕೆಲಸ ಮಾಡಿದ್ದಾರೆ.

ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್
Bipin rawat wife madhulika

By

Published : Dec 9, 2021, 9:58 AM IST

Updated : Dec 9, 2021, 10:05 AM IST

ನವದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಇತರೆ 13 ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಮಧುಲಿಕಾ ಅವರ ಸಾಧನೆಯ ಕುರಿತಾದ ಮಾಹಿತಿ ಇಲ್ಲಿದೆ ಓದಿ.

ಮಧ್ಯಪ್ರದೇಶದ ರಾಜಕಾರಣಿ ದಿ.ಮೃಗೇಂದ್ರ ಸಿಂಗ್ ಅವರ ಪುತ್ರಿಯಾದ ಮಧುಲಿಕಾ ರಾವತ್ ಅವರು ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷೆಯಾಗಿದ್ದರು. ಈ ಅಸೋಸಿಯೇಷನ್ ಸೇನಾ ಸಿಬ್ಬಂದಿಯ ಪತ್ನಿಯರು, ಮಕ್ಕಳು ಮತ್ತು ಅವಲಂಬಿತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಸೈನಿಕರ ಕುಟುಂಬಗಳ ಸದಸ್ಯರಿಗೆ ಸಹಾಯ ಮಾಡುವುದು ಈ ಸಂಸ್ಥೆಯ ಮುಖ್ಯ ಗುರಿ. ಎಡಬ್ಲ್ಯುಡಬ್ಲ್ಯುಎ ಭಾರತದ ಅತಿದೊಡ್ಡ ಎನ್​​ಜಿಒಗಳಲ್ಲಿ ಒಂದಾಗಿದ್ದು, ಮಧುಲಿಕಾ ರಾವತ್ ಅವರು ಸೇನಾ ಹೋರಾಟದಲ್ಲಿ ತಮ್ಮ ಪತಿಯರನ್ನು ಕಳೆದುಕೊಂಡ ಮಹಿಳೆಯರು ಮತ್ತು ದಿವ್ಯಾಂಗ ಮಕ್ಕಳಿಗೆ ಸಹಾಯ ಮಾಡುವ ಅನೇಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಆಯೋಜಿಸುತ್ತದೆ.

ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್

ಮಧುಲಿಕಾ ರಾವತ್ ಅವರು ಸೈನಿಕರ ಕುಟುಂಬದ ಸದಸ್ಯರಲ್ಲಿನ ಕೌಶಲ್ಯಗಳನ್ನು ಹೊರತೆಗೆಯಲು ಶ್ರಮಿಸುತ್ತಿದ್ದರು. ಸೇನಾ ಸಿಬ್ಬಂದಿಯ ಪತ್ನಿಯರನ್ನು ಸಬಲೀಕರಣಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದರು. ಬ್ಯೂಟಿಷಿಯನ್ ಕೋರ್ಸ್‌ಗಳ ಜೊತೆಗೆ ಟೈಲರಿಂಗ್ ಮತ್ತು ಬ್ಯಾಗ್ ಮೇಕಿಂಗ್ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತಿದ್ದರು.

ರಾಷ್ಟ್ರಪತಿ ಭೇಟಿಯ ವೇಳೆ ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್

ಸೈನಿಕರ ಪತ್ನಿಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡಲು ಕೇಕ್ ಮತ್ತು ಚಾಕೊಲೇಟ್ ತಯಾರಿಸುವ ಕೋರ್ಸ್​ಗಳಿಗೂ ಸಹ ಪ್ರೋತ್ಸಾಹ ನೀಡುತ್ತಿದ್ದರು. ಇದರ ಜತೆಗೆ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಸಾಮಾನ್ಯ ಜನರಿಗಾಗಿಯೂ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಕ್ಯಾನ್ಸರ್ ಪೀಡಿತರ ಶ್ರೇಯಸ್ಸಿಗಾಗಿ ಶ್ರಮಿಸಿದ್ದಾರೆ.

ಭಾರತೀಯ ರಕ್ಷಣಾ ಪಡೆಗಳ ವೈಮಾನಿಕ ಪ್ರದರ್ಶನ ವೀಕ್ಷಿಸುತ್ತಿರುವ ಜನರಲ್‌ ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್

ಮಧುಲಿಕಾ ರಾವತ್ ಅವರು ಮೂಲತಃ ಮಧ್ಯಪ್ರದೇಶ ಶಹ್ದೋಲ್ ಜಿಲ್ಲೆಯ ಸೋಹಾಗಪುರ್​ದವರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸೈಕಾಲಜಿ ವಿಷಯಲ್ಲಿ ಪದವಿ ಪಡೆದಿದ್ದಾರೆ. ರಾವತ್ ದಂಪತಿಗೆ ಕೃತಿಕಾ ರಾವತ್ ಹಾಗೂ ತಾರಿಣಿ ರಾವತ್ ಎಂಬ ಇಬ್ಬರು ಪುತ್ರಿಯರಿದ್ದಾರೆ. ಉತ್ತರಾಖಂಡದ ಸಂಸ್ಕೃತಿಯನ್ನು ಹೆಚ್ಚಾಗಿ ಇಷ್ಟಪಡುವ ಮಧುಲಿಕಾ, ತುಂಬಾ ಸರಳ ಸ್ವಭಾವದವರಾಗಿದ್ದರು.

ಬಿಪಿನ್ ರಾವತ್ , ಮಧುಲಿಕಾ ರಾವತ್
Last Updated : Dec 9, 2021, 10:05 AM IST

ABOUT THE AUTHOR

...view details