ವಾಷಿಂಗ್ಟನ್: 740 ಬಿಲಿಯನ್ ಯುಎಸ್ಡಿ ಡಾಲರ್ ರಕ್ಷಣಾ ನೀತಿ ಮಸೂದೆ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಟೋವನ್ನು ಯುಎಸ್ ಕಾಂಗ್ರೆಸ್ ರದ್ದುಗೊಳಿಸಿದ್ದರಿಂದ ಭಾರತದ ಕಡೆಗೆ ಚೀನಾದ ಆಕ್ರಮಣವನ್ನು ಖಂಡಿಸುವ ಉಭಯ ಪಕ್ಷೀಯ ನಿಬಂಧನೆಯು ಕಾನೂನಾಗಿ ಮಾರ್ಪಟ್ಟಿದೆ.
ಭಾರತದ ವಿರುದ್ಧ ಚೀನಾ ಮಿಲಿಟರಿ ಆಕ್ರಮಣ: ಡ್ರ್ಯಾಗನ್ ಧೋರಣೆ ವಿರೋಧಿಸಿದ ಯುಎಸ್ ಕಾಯ್ದೆ - ಭಾರತ ಚೀನಾ ಸಂಘರ್ಷ
ಕಾನೂನಾಗಿ ಮಾರ್ಪಟ್ಟಿರುವ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ, ಎಲ್‌ಎಸಿ ಉದ್ದಕ್ಕೂ ಭಾರತದ ಕಡೆಗೆ ಮಿಲಿಟರಿ ಆಕ್ರಮಣ ಕೊನೆಗೊಳಿಸುವಂತೆ ಚೀನಾ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಒಳಗೊಂಡಿದೆ.
indo china
ಟ್ರಂಪ್ ವೀಟೋವನ್ನು ಯುಎಸ್ ಕಾಂಗ್ರೆಸ್ ರದ್ದುಗೊಳಿಸಿದ ನಂತರ ಕಾನೂನಾಗಿ ಮಾರ್ಪಟ್ಟ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ (ಎನ್‌ಡಿಎಎ) 2021, ಎಲ್‌ಎಸಿ ಉದ್ದಕ್ಕೂ ಭಾರತದ ಕಡೆಗೆ ಮಿಲಿಟರಿ ಆಕ್ರಮಣ ಕೊನೆಗೊಳಿಸುವಂತೆ ಚೀನಾ ಸರ್ಕಾರ ಒತ್ತಾಯಿಸುವ ನಿರ್ಣಯ ಒಳಗೊಂಡಿತ್ತು.
ಅಧ್ಯಕ್ಷ ಟ್ರಂಪ್ ಡಿಸೆಂಬರ್ 23ರಂದು ಉಭಯ ಪಕ್ಷೀಯ ಬೆಂಬಲವನ್ನು ಹೊಂದಿರುವ ಎನ್‌ಡಿಎಎಗೆ ವೀಟೋ ನೀಡಿದ್ದು, ರಾಷ್ಟ್ರೀಯ ಭದ್ರತೆಗೆ ಹಾನಿ ಉಂಟುಮಾಡುವ ನಿಬಂಧನೆಗಳನ್ನು ಅದು ಹೊಂದಿದೆ ಎಂದು ವಾದಿಸಿದ್ದರು. ಆದರೆ, ಯುಎಸ್ ಕಾಂಗ್ರೆಸ್ ಅದನ್ನು ತಿರಸ್ಕರಿಸಿದೆ.