ಹೈದರಾಬಾದ್: ಚೆಸ್ನ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಕುರಿತ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರೈ ವಿಶ್ವನಾಥನ್ ಆನಂದ್ ಅವರ ಬಯೋಪಿಕ್ ನಿರ್ದೇಶಿಸಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಆನಂದ್ ಎಲ್ ರೈ ಈ ಮೊದಲು 'ತನು ವೆಡ್ಸ್ ಮನು' ಮತ್ತು 'ರಂಝಾನಾ' ಚಿತ್ರವನ್ನು ನಿರ್ದೇಶಿಸಿ, ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು. ವರದಿಗಳ ಪ್ರಕಾರ ಈ ಮೊದಲೇ ಹಲವಾರು ಮಂದಿ ನಿರ್ಮಾಪಕರು ವಿಶ್ವನಾಥನ್ ಆನಂದ್ ಅವರಿಗೆ ಬಯೋಪಿಕ್ಗೆ ಅನುಮತಿಗಾಗಿ ಕೋರಿದ್ದರು. ಆದರೆ ಈಗ ವಿಶ್ವನಾಥನ್ ಆನಂದ್ ಅನುಮತಿ ನೀಡಿದ್ದಾರೆ ಎನ್ನಲಾಗ್ತಿದೆ.
ವಿಶ್ವನಾಥನ್ ಆನಂದ್ ಅವರು ತಮ್ಮ ಆರನೇ ವಯಸ್ಸಿನಲ್ಲಿ ಚೆಸ್ ಆಡುವುದನ್ನು ಪ್ರಾರಂಭಿಸಿದ್ದರು. ತನ್ನ ತಾಯಿಯಿಂದ ಚೆಸ್ ಆಡುವುದನ್ನು ಕಲಿತ ವಿಶ್ವನಾಥನ್ ಆನಂದ್ ತನ್ನ ಸಹೋದರಿ ಮತ್ತು ಸಹೋದರನೊಂದಿಗೆ ಆಟವನ್ನು ಆಡುತ್ತಿದ್ದರು. ಇದರೊಂದಿಗೆ ಅವರಿಗೆ ಬಾಲ್ಯದಲ್ಲಿಯೇ ಚೆಸ್ ಆಟದಲ್ಲಿ ಹಿಡಿತ ಸಿಕ್ಕಿತ್ತು. ಇದಾದ ನಂತರ ಐದು ವಿಶ್ವಚಾಂಪಿಯನ್ಶಿಪ್ಗಳಲ್ಲಿ ಗೆದ್ದಿದ್ದು ಇತಿಹಾಸ.