ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ, ಸಂಸ್ಥಾಪಕ ಹಾಗು ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರ ಜೀವನಚರಿತ್ರೆ ಅಕ್ಟೋಬರ್‌ನಲ್ಲಿ ಹೊರಬರಲಿದೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ (ಪಿಆರ್‌ಎಚ್‌ಐ) ಸೋಮವಾರ ಪ್ರಕಟಿಸಿದೆ.
ಪತ್ರಕರ್ತ, ಲೇಖಕ ಆರ್.ಎನ್.ಭಾಸ್ಕರ್ ಬರೆದ "ಗೌತಮ್ ಅದಾನಿ: ದಿ ಮ್ಯಾನ್ ಹೂ ಚೇಂಜ್ಡ್ ಇಂಡಿಯಾ" ಪುಸ್ತಕವು ಮೊದಲ ಬಾರಿಗೆ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಅವರ ಬದುಕಿನ ಕುತೂಹಲಕಾರಿ ಅಂಶಗಳನ್ನು ಬೆಳಕಿಗೆ ತರಲಿದೆ. ಪ್ರಸ್ತುತ ವಿಮಾನ ನಿಲ್ದಾಣಗಳು, ನಗರ ಅನಿಲ ವಿತರಣೆ, ವಿದ್ಯುತ್ ಪ್ರಸರಣ, ಉಷ್ಣ ವಿದ್ಯುತ್ ಮುಂತಾದ ಕ್ಷೇತ್ರಗಳಲ್ಲಿ ದೇಶದ ಅತಿದೊಡ್ಡ ಖಾಸಗಿ ವಲಯದ ಉದ್ಯಮಗಳನ್ನು ಅದಾಮಿ ಮುನ್ನಡೆಸುತ್ತಿದ್ದಾರೆ.