ತಿರುವನಂತಪುರಂ: ಬಾಲಿವುಡ್ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನ್ನು ಇ.ಡಿ (ಜಾರಿ ನಿರ್ದೇಶನಾಲಯ) ನಾಲ್ಕು ದಿನಗಳ ಕಾಲ ತನ್ನ ವಶಕ್ಕೆ ಪಡೆದಿದ್ದು, ಇದೀಗ ಮನೆಯೊಳಗೆ ಪತ್ನಿ, ಮಗು ಮತ್ತು ಇತರರನ್ನು ಭೇಟಿಯಾಗಬೇಕೆಂದು ಒತ್ತಾಯಿಸಿ ಕೊಡಿಯೇರಿಯ ಸಂಬಂಧಿಕರು ಮನೆಯ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.
ಡ್ರಗ್ಸ್ ಪ್ರಕರಣ: ಬಿನೇಶ್ ಕೋಡಿಯೇರಿ ಮನೆ ಮುಂದೆ ಸಂಬಂಧಿಕರ ಪ್ರತಿಭಟನೆ - ತಿರುವನಂತಪುರಂ ಬಿನೇಶ್ ಕೋಡಿಯೇರಿ ಮನೆ ಮುಂದೆ ಸಂಬಂಧಿಕರ ಪ್ರತಿಭಟನೆ
ಸ್ಯಾಂಡಲ್ವುಡ್ ಡ್ರಗ್ಸ್ ಜಾಲದೊಂದಿಗೆ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿನೇಶ್ ಕೋಡಿಯೇರಿಯನ್ನು ಇ. ಡಿ (ಜಾರಿ ನಿರ್ದೇಶನಾಲಯ) ತನಿಖೆಗಾಗಿ ವಶಕ್ಕೆ ಪಡೆದಿರುವುದರಿಂದ ಅವರ ಮನೆಯ ಮುಂದೆ ಸಂಬಂಧಿಕರು ಪ್ರತಿಭಟನೆ ಆರಂಭಿಸಿದ್ದಾರೆ.
ಬಿನೇಶ್ ಕೋಡಿಯೇರಿ ಮನೆ ಮುಂದೆ ಸಂಬಂಧಿಕರ ಪ್ರತಿಭಟನೆ
ನಿನ್ನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿನೀಶ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದು, ಇದುವರೆಗೂ ಮನೆಯಿಂದ ಹೊರಬಂದಿಲ್ಲ. ಪೊಲೀಸ್ ಅಧಿಕಾರಿಗಳು ಸಂಬಂಧಿಕರನ್ನು ಮನೆಗೆ ಪ್ರವೇಶಿಸಲು ಅನುಮತಿಸಲಿಲ್ಲ. ಹೀಗಾಗಿ, ತಿರುವನಂತಪುರಂನ ಮರುತಾಮ್ಖುಜಿ ಮನೆಯ ಗೇಟ್ ಹೊರಗೆ ಸಂಬಂಧಿಕರು ಪ್ರತಿಭಟಿಸುತ್ತಿದ್ದಾರೆ.