ಡಾರ್ಜಿಲಿಂಗ್ ( ಪಶ್ಚಿಮ ಬಂಗಾಳ ): ರಾಜ್ಯ ಸರ್ಕಾರವು ಈಗಾಗಲೇ ಘೋಷಣೆ ಮಾಡಿರುವ ಇಲ್ಲಿನ 45 ಕ್ಷೇತ್ರಗಳಲ್ಲಿ ನಡೆಯುವ ಜಿಟಿಎ (ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್) ಚುನಾವಣೆಯನ್ನು ವಿರೋಧಿಸಿ ಗೂರ್ಖಾ ಜನಮುಕ್ತಿ ಮೋರ್ಚಾದ ಮುಖ್ಯಸ್ಥ ಬಿಮಲ್ ಗುರುಂಗ್ ಅವರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಸಿಂಗ್ಮಾರಿಯಲ್ಲಿರುವ ಗೂರ್ಖಾ ಜನಮುಕ್ತಿ ಮೋರ್ಚಾದ ಕೇಂದ್ರ ಕಚೇರಿಯಲ್ಲಿ ಇವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಜಿಟಿಎ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಬಂಡಾಯ ಭುಗಿಲೆದ್ದಿದೆ. ಚುನಾವಣೆಯನ್ನು ವಿರೋಧಿಸಿ ಪಕ್ಷದ ಕಚೇರಿಯ ಹೊರಗೆ ನಡೆದ ಪ್ರತಿಭಟನೆಯಲ್ಲಿ ಜನ್ ಮುಕ್ತಿ ಮೋರ್ಚಾದ ಕಾರ್ಯಕರ್ತರು ಮತ್ತು ಬೆಂಬಲಿಗರು ಬಿಮಲ್ ಗುರುಂಗ್ ಅವರ ಉಪವಾಸ ಸತ್ಯಾಗ್ರಹಕ್ಕೆ ಸಹಕಾರ ನೀಡಿದ್ದಾರೆ.