ಸಿಯಾಟಲ್(ಅಮೆರಿಕಾ):ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಕೋವಿಡ್–19 ಇರುವುದು ಮಂಗಳವಾರ ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದೇನೆ. ತಜ್ಞರ ಸಲಹೆಯಂತೆ ಪ್ರತ್ಯೇಕವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ಗೆ ಕೋವಿಡ್ ಸೋಂಕು - ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್
ಬಿಲ್ ಗೇಟ್ಸ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್
ಅಮೆರಿಕದ ಸಿಯಾಟಲ್ ಮೂಲದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರಪಂಚದಲ್ಲೇ ಅತ್ಯಂತ ಪ್ರಭಾವಶಾಲಿ ಖಾಸಗಿ ಪ್ರತಿಷ್ಠಾನವಾಗಿದೆ. ಇದು ಸುಮಾರು $65 ಬಿಲಿಯನ್ ದತ್ತಿನಿಧಿ ಹೊಂದಿದೆ. ಬಿಲ್ ಗೇಟ್ಸ್ ಅವರು ಕೋವಿಡ್ ಸಾಂಕ್ರಾಮಿಕ ಉಪಶಮನಕ್ಕಾಗಿ ನಿರ್ದಿಷ್ಟವಾಗಿ ಬಡ ದೇಶಗಳಿಗೆ ಲಸಿಕೆ ಮತ್ತು ಔಷಧಿ ವಿತರಿಸಿರುವುದು ಇಲ್ಲಿ ಸ್ಮರಣಾರ್ಹ.
ಇದನ್ನೂ ಓದಿ:ಭಾರತದಲ್ಲಿ 2,288 ಹೊಸ ಕೋವಿಡ್ ಕೇಸ್ ಪತ್ತೆ, 10 ಮಂದಿ ಸಾವು