ಕರ್ನಾಟಕ

karnataka

ETV Bharat / bharat

11 ಅಪರಾಧಿಗಳ ಬಿಡುಗಡೆ ವಿರುದ್ಧ ಸಂತ್ರಸ್ತೆ ಬಿಲ್ಕಿಸ್​ ಬಾನೊ ಸುಪ್ರೀಂಕೋರ್ಟ್​​ಗೆ​ ಮೊರೆ - ಅವಧಿಗೆ ಮುನ್ನವೇ ಅಪರಾಧಿಗಳ ಬಿಡುಗಡೆ

ಗುಜರಾತ್​ ಗಲಭೆಯಲ್ಲಿ ಬಿಲ್ಕಿಸ್​ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಕುಟುಂಬಸ್ಥರನ್ನು ಕೊಂದ 11 ಆರೋಪಿಗಳ ಬಿಡುಗಡೆಯ ವಿರುದ್ಧ ಸಂತ್ರಸ್ತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

bilkis-bano-approaches-supreme-court
ಬಿಲ್ಕಿಸ್​ ಬಾನೊ ಸುಪ್ರೀಂಕೋರ್ಟ್​ ಮೊರೆ

By

Published : Nov 30, 2022, 4:12 PM IST

ನವದೆಹಲಿ:2002ರ ಗುಜರಾತ್ ಗಲಭೆಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಅಪರಾಧಿಗಳನ್ನು ಅವಧಿಗೆ ಮುನ್ನವೇ ಗುಜರಾತ್​ ಸರ್ಕಾರ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನೊ ಬುಧವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ಒಪ್ಪಿಗೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆ ನಡೆಸಬೇಕು ಎಂದು ಬಿಲ್ಕಿಸ್​ ಬಾನೊ ಅವರ ಪರ ವಕೀಲರು ಒತ್ತಾಯಿಸಿದ್ದಾರೆ. ಆದರೆ, ಕೋರ್ಟ್​ ಯಾವ ಪೀಠಕ್ಕೆ ಅರ್ಜಿ ವರ್ಗಾಯಿಸಲಿದೆ ಎಂಬುದು ತಿಳಿದು ಬಂದಿಲ್ಲ.

ಗುಜರಾತ್​ ಸರ್ಕಾರ ಆಗಸ್ಟ್​ 15 ರ ಸ್ವಾತಂತ್ರ್ಯ ದಿನದಂದು ಬಿಲ್ಕಿಸ್​ ಬಾನೊ ಮೇಲೆ ಅತ್ಯಾಚಾರ ಮಾಡಿ ಅವರ ಕುಟುಂಬಸ್ಥರನ್ನು ಕೊಂದ 11 ಆರೋಪಿಗಳನ್ನು ಸನ್ನತಡೆಯ ಆಧಾರದ ಮೇಲೆ ಬಿಡುಗಡೆ ಮಾಡಿತ್ತು. ಇದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಓದಿ:ಲಿಂಗ ತಟಸ್ಥ ಹಾಗೂ ಹೋರಾಟದ ಹುದ್ದೆಗಳಲ್ಲೂ ಮಹಿಳೆಯರು: ನೌಕಾಪಡೆ ಮುಖ್ಯಸ್ಥ

ABOUT THE AUTHOR

...view details