ಕರ್ನಾಟಕ

karnataka

ETV Bharat / bharat

Shocking Video: ಕದ್ದ ಫೋನ್​ ಜೊತೆ ಮಹಿಳೆಯನ್ನೂ ರಸ್ತೆಯಲ್ಲಿ ಎಳೆದೊಯ್ದು ಬಿಸಾಡಿದ ದುರುಳರು! - ಶಾಲಿಮಾರ್ ಬಾಗ್​ ನಲ್ಲಿ ಮೊಬೈಲ್​ ಫೋನ್ ಕಳ್ಳತನ

ನವದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ಮೊಬೈಲ್​ ಕಳ್ಳತನ ಮಾಡಿ ಖದೀಮರಿಬ್ಬರು ಫೋನ್​ನೊಂದಿಗೆ ಮಹಿಳೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.

Bikers snatch womans phone drag her on road at Delhis Shalimar Bagh
ಕದ್ದ ಫೋನ್​ ಜೊತೆ ಮಹಿಳೆಯನ್ನು ಎಳೆದೊಯ್ದ ದುರುಳರು

By

Published : Dec 17, 2021, 7:06 PM IST

Updated : Dec 17, 2021, 8:21 PM IST

ನವದೆಹಲಿ:ಮೊಬೈಲ್​ ಕಳ್ಳತನ ಮಾಡಿ ಖದೀಮರಿಬ್ಬರು ಫೋನ್​ನೊಂದಿಗೆ ಮಹಿಳೆಯನ್ನು ಅಮಾನವೀಯವಾಗಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಘಟನೆ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ನಡೆದಿದೆ.

ಕದ್ದ ಫೋನ್​ ಜೊತೆ ಮಹಿಳೆಯನ್ನೂ ರಸ್ತೆಯಲ್ಲಿ ಎಳೆದೊಯ್ದು ಬಿಸಾಡಿದ ದುರುಳರು

ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯಿಂದ ಮೊಬೈಲ್​ ಫೋನ್​ ಕಸಿದುಕೊಂಡು ಆಕೆಯನ್ನು ರಸ್ತೆಯಲ್ಲಿ ಸುಮಾರು 150 ಮೀಟರ್​​​ವರೆಗೆ ಸ್ಕೂಟಿಯೊಂದಿಗೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ರಸ್ತೆಯಲ್ಲಿ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಕೂಡಲೇ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಮಹಿಳೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಅಂದರ್​:

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ಕೂಟಿ ಸಮೇತ ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಖಾಕಿ ಪಡೆ ಶೋಧ ಕಾರ್ಯ ನಡೆಸುತ್ತಿದೆ.

ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್ ಕುಮಾರ್ ಹೇಳಿಕೆಗೆ ಪ್ರಿಯಾಂಕಾ ಗಾಂಧಿ, ಖರ್ಗೆ ಖಂಡನೆ

Last Updated : Dec 17, 2021, 8:21 PM IST

ABOUT THE AUTHOR

...view details