ಕರ್ನಾಟಕ

karnataka

ETV Bharat / bharat

Watch: ಹಠಾತ್ U-Turn ತೆಗೆದುಕೊಂಡ ಕಾರು: ಬೈಕ್​ ಸವಾರ ಸಾವು - maharashtra road accident

ಮುಂಬೈನ ಲೋಯರ್​ ಪರೇಲ್​ ಸೇತುವೆ ಮೇಲೆ ಸಾಗುತ್ತಿದ್ದ ಕಾರು ಹಠಾತ್​ ಯೂಟರ್ನ್​ ತೆಗೆದುಕೊಂಡ ಪರಿಣಾಮ ಬೈಕ್​ ಸವಾರ ಮೃತಪಟ್ಟಿದ್ದಾನೆ.

ಭೀಕರ ಅಪಘಾತ
ಭೀಕರ ಅಪಘಾತ

By

Published : Oct 1, 2021, 10:10 AM IST

ಮುಂಬೈ (ಮಹಾರಾಷ್ಟ್ರ): ಕಾರು ಚಾಲಕನೊಬ್ಬ ತಪ್ಪಾಗಿ ಯೂಟರ್ನ್​ ತೆಗೆದುಕೊಂಡ ಪರಿಣಾಮ ಬೈಕ್​ ಸವಾರನ ಪ್ರಾಣಪಕ್ಷಿ ಹಾರಿ ಹೋಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಭೀಕರ ಅಪಘಾತದ ಸಿಸಿಟಿವಿ ದೃಶ್ಯ

ಮುಂಬೈನ ಲೋಯರ್​ ಪರೇಲ್​ ಸೇತುವೆ ಮೇಲೆ ಸಾಗುತ್ತಿದ್ದ ಕಾರು ಹಠಾತ್​ ಯೂಟರ್ನ್​ ತೆಗೆದುಕೊಂಡಿದೆ. ಈ ವೇಳೆ, ವೇಗವಾಗಿ ಬರುತ್ತಿದ್ದ ಭಾವೇಶ್ ಎಂಬ ಬೈಕ್​ ಸವಾರ ನಿಯಂತ್ರಣ ಕಳೆದುಕೊಂಡು ಕಾರಿಗೆ ಗುದ್ದಿ ಕೆಳಗೆ ಬಿದ್ದಿದ್ದಾನೆ. ಇದೇ ವೇಳೆ ಬಂದ ಮತ್ತೊಂದು ಬೈಕ್​ ಭಾವೇಶ್ ಮೇಲೆ ಹರಿದಿದ್ದು, ಆ ಬೈಕ್​ ಸವಾರನೂ ಬಿದ್ದಿದ್ದಾನೆ.

ಇದನ್ನೂ ಓದಿ: ಬಸ್ - ಡಂಪರ್ ನಡುವೆ ಡಿಕ್ಕಿ: 7 ಮಂದಿ ದುರ್ಮರಣ

ಇಬ್ಬರು ಬೈಕ್​ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕಾರಿಗೆ ಗುದ್ದಿದ್ದ ಭಾವೇಶ್ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಘಾತ ಸಂಭವಿಸುತ್ತಿದ್ದಂತೆಯೇ ಕಾಲ್ಕಿತ್ತಿದ್ದ ಕಾರು ಚಾಲಕನನ್ನು ಬಂಧಿಸಿದ್ದಾರೆ.

ABOUT THE AUTHOR

...view details