ತಿರುವನಂತಪುರಂ (ಕೇರಳ): ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಕೇರಳದ ತಿರುವನಂತಪುರಂ ಸಮೀಪದಲ್ಲಿ ನಡೆದಿದೆ. 55 ವರ್ಷದ ಸಂಧ್ಯಾ ಎಂಬುವವರೇ ಮಹಿಳೆ ಮೃತ ಮಹಿಳೆ. ಬೈಕ್ ಗುದ್ದಿದ ರಭಸಕ್ಕೆ ರಸ್ತೆಯಿಂದ ಬಹು ದೂರ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಬೈಕ್ ಸವಾರನಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಕೋವಲಂನಲ್ಲಿ ಈ ಘಟನೆ ಜರುಗಿದೆ. ಈ ಪ್ರವಾಸಿ ತಾಣದಲ್ಲಿ ಯುವಕರ ಗುಂಪು ವೇಗದಲ್ಲಿ ಬೈಕ್‌ಗಳನ್ನು ಓಡಿಸುವುದನ್ನು ಸಾಮಾನ್ಯವಾಗಿದೆ. ಕೆಲ ಯುವಕರು ಬೈಕ್ ರೇಸಿಂಗ್ನಲ್ಲಿ ತೊಡಗಿದ್ದಾಗ ಈ ದುರಂತ ಸಂಭವಿಸಿದೆ. ಮರಣೋತ್ತರ ಪರೀಕ್ಷೆಯ ನಂತರ ಸಂಧ್ಯಾ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೋವಲಂನಲ್ಲಿ ಇಂತಹ ಯುವಕರ ಬೈಕ್ ರೇಸಿಂಗ್ ಕಾರಣದಿಂದಾಗಿ ಈಗಾಗಲೇ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೋವಲಂ ಪ್ರವಾಸಿಗರ ಅತ್ಯಂತ ಮೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪ್ರಪಂಚ ಮತ್ತು ದೇಶದ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕೋವಲಂ ತಾಣಕ್ಕೆ ಭೇಟಿ ಕೊಡುತ್ತಾರೆ. ಈ ಪ್ರವಾಸಿ ತಾಣದಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಚಾರ್ಟರ್ಡ್ ವಿಮಾನಗಳ ಹಾರಾಟ ದೃಶ್ಯ ಸಹ ಸಾಮಾನ್ಯವಾಗಿರುತ್ತದೆ. ಇಲ್ಲಿನ ರಸ್ತೆಗಳಲ್ಲಿ ಯುವಕರರು ಅತಿ ವೇಗದಲ್ಲಿ ಬೈಕ್ ಓಡಿಸುತ್ತಾರೆ. ಇದನ್ನು ತಡೆಯಲು ನಾವು ಪೊಲೀಸರ ಮೇಲೆ ಎಷ್ಟೇ ಒತ್ತಡ ಹೇರಲು ಪ್ರಯತ್ನಿಸಿದರೂ ಅವರು ಕ್ರಮಕೈಗೊಳ್ಳುವುದಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.