ಪಾಟ್ನಾ (ಬಿಹಾರ):ಬಿಹಾರದ ಪಾಟ್ನಾದಲ್ಲಿ ಸಂಚಾರ ನಿಯಮಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಯಿತು. ಟ್ರಾಫಿಕ್ ನಿಯಮಗಳ ವಿರೋಧಿಸಿ ಪ್ರತಿಭಟನೆ ನಡೆಸಿ, ಪಾಟ್ನಾದಲ್ಲಿ ಅವರ ಬೈಕ್ನ್ನೇ ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಂಚಾರಿ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಗೆ ದಿನಕ್ಕೆ ನಾಲ್ಕು ಬಾರಿ ದಂಡ ಹಾಕುತ್ತಿರುವುದು ತಪ್ಪು. ಸರ್ಕಾರ ಉದ್ದೇಶಪೂರ್ವಕವಾಗಿ ಜನರಿಗೆ ತೊಂದರೆ ನೀಡುತ್ತಿದೆ ಎಂದು ಪ್ರತಿಭಟನಕಾರರು ಕಿಡಿಕಾರಿದರು.
ಪಾಟ್ನಾದಲ್ಲಿ ಬೈಕ್‌ನ ಅಂತಿಮ ಸಂಸ್ಕಾರ:ಸಮಾಜ ಸೇವಕ ಕೃಷ್ಣ ಕುಮಾರ್ ಕಲ್ಲು ಅವರು, ಬೈಕ್‌ನ ಅಂತಿಮ ಸಂಸ್ಕಾರ ನೆರವೇರಿಸಿದರು. ಇಂತಹ ನಿಯಮ ತಪ್ಪು ಎಂದು ಸರ್ಕಾರದ ವಿರುದ್ಧ ಆರೋಪಿಸಿದರು. ಇಂತಹ ನಿಯಮದಿಂದ ಬಿಹಾರದ ಜನಸಾಮಾನ್ಯರು ತೀವ್ರ ತೊಂದರೆಗೀಡಾಗಿದ್ದಾರೆ. ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಆದರೆ, ದಿನಕ್ಕೆ ನಾಲ್ಕು ಬಾರಿ ದಂಡ ಹಾಕುವುದು ತಪ್ಪು ಎಂದರು.
ಗಂಗಾನದಿಗೆ ಹಾರಿ ಆತ್ಮಹತ್ಯೆ ಮಾಡುಕೊಳ್ಳುವ ಎಚ್ಚರಿಕೆ:ಪ್ರತಿಭಟನಾಕಾರರು, ಈ ವೇಳೆ ಸಿಎಂ ನಿತೀಶ್ ಕುಮಾರ್‌ಗೂ ಎಚ್ಚರಿಕೆ ನೀಡಿದರು. ನಿತೀಶ್ ಕುಮಾರ್ ಈ ಸಂಚಾರ ನಿಯಮ ಹಿಂಪಡೆಯದಿದ್ದರೆ, ಗಂಗಾನದಿಯಲ್ಲಿ ಬೈಕ್ ಸಮೇತ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಈ ವೇಳೆ ಹಲವು ಪ್ರತಿಭಟನಾಕಾರರು ಬಿಹಾರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಬಿಹಾರದ ಸರ್ಕಾರಿ ವ್ಯವಸ್ಥೆಯ ಸ್ವಾಹಾ ಹಾಗೂ ವಿವಿಧ ಪಠಣಗಳನ್ನು ಪಠಿಸಿದರು. ಎಲ್ಲರೂ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.