ಕರ್ನಾಟಕ

karnataka

ETV Bharat / bharat

ಅಪಹರಣ ಪ್ರಕರಣದ ಆರೋಪಿಗೆ ಬಿಹಾರದ ನಿತೀಶ್‌ ಸಂಪುಟದಲ್ಲಿ ಕಾನೂನು ಸಚಿವ ಸ್ಥಾನ - ಬಿಹಾರ ಕಾನೂನು ಸಚಿವ

ಬಿಹಾರದಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಸರ್ಕಾರದ ಸಚಿವರುಗಳ ವಿರುದ್ಧ ಗಂಭೀರ ಆರೋಪಗಳು ಕೇಳಿ ಬರತೊಡಗಿವೆ.

bihars-new-law-minister-accused-of-kidnapping-case
ಬಿಹಾರ್​ನ ನೂತನ ಕಾನೂನು ಸಚಿವರು ಕಿಡ್ನ್ಯಾಪ್ ಪ್ರಕರಣದ ಆರೋಪಿ

By

Published : Aug 17, 2022, 3:44 PM IST

ಪಾಟ್ನಾ: ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಎಂಎಲ್‌ಸಿ ಕಾರ್ತಿಕ್ ಕುಮಾರ್ ವಿರುದ್ಧ ಅನೇಕ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಅವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಮಹಾ ಸಮ್ಮಿಶ್ರ ಸರ್ಕಾರದ ಸಂಪುಟಕ್ಕೆ ಸೇರಿಸಿಕೊಂಡು ಕಾನೂನು ಸಚಿವಾಲಯವನ್ನು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಂಗಳವಾರ ಒಟ್ಟು 31 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಈ ಪೈಕಿ ಹಲವಾರು ಸಚಿವರುಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಕಾರ್ತಿಕ್ ಕುಮಾರ್ ವಿರುದ್ಧ ಬಿಹ್ತಾ ಮತ್ತು ಮೊಕಾಮಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆದರೆ, ಇದುವರೆಗೆ ಯಾವುದೇ ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯದಿಂದ ಶಿಕ್ಷೆಯಾಗಿಲ್ಲ. ರಾಜೀವ್ ರಂಜನ್ ಅವರ ಅಪಹರಣ ಪ್ರಕರಣದಲ್ಲಿಯೂ ಬಿಹಾರದ ಹಾಲಿ ಕಾನೂನು ಸಚಿವರು ಆರೋಪಿಯಾಗಿದ್ದಾರೆ. 2014ರಲ್ಲಿ ರಾಜೀವ್ ರಂಜನ್ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಈ ವಿಚಾರದಲ್ಲಿ ಕೋರ್ಟ್ ತಾನಾಗಿಯೇ ಮಧ್ಯ ಪ್ರವೇಶಿಸಿದ ನಂತರ ಕಾರ್ತಿಕ್ ಕುಮಾರ್ ವಿರುದ್ಧ ಬಿಹ್ತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸೆಕ್ಷನ್ 164 ರ ಅಡಿಯಲ್ಲಿ ನ್ಯಾಯಾಲಯವು ವಾರಂಟ್ ಕೂಡ ಹೊರಡಿಸಿದೆ. ಇಷ್ಟಾದರೂ ಕಾರ್ತಿಕ್ ನ್ಯಾಯಾಲಯದ ಮುಂದೆ ಶರಣಾಗಿಲ್ಲ ಅಥವಾ ಜಾಮೀನಿಗೆ ಅರ್ಜಿಯನ್ನೂ ಸಲ್ಲಿಸಿಲ್ಲ. ವಿಚಿತ್ರ ಏನೆಂದರೆ, ಅವರು ಆಗಸ್ಟ್ 16 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಅವತ್ತೇ ಅವರು ಸಚಿವ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನನ್ನ ಮೇಲಿನ ಆರೋಪಗಳು ಇನ್ನೂ ಸಾಬೀತಾಗಿಲ್ಲ. ಈ ಎಲ್ಲ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಕಾನೂನು ತನ್ನ ಕೆಲಸ ಮಾಡಲಿ ಎಂದು ಕಾನೂನು ಸಚಿವ ಕುಮಾರ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

ರಾಜಕೀಯ ರೌಡಿ ಅನಂತ್ ಸಿಂಗ್ ಬೆಂಬಲಿಗರು ಕಾರ್ತಿಕ್ ಕುಮಾರ್ ಅವರನ್ನು 'ಕಾರ್ತಿಕ್ ಮಾಸ್ಟರ್' ಎಂದೇ ಕರೆಯುತ್ತಾರೆ. 2005 ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ, ಕಾರ್ತಿಕ್ ಮಾಸ್ಟರ್ ಮತ್ತು ಅನಂತ್ ಸಿಂಗ್ ನಡುವಿನ ಸ್ನೇಹ ಗಾಢವಾಗಿ ಬೆಳೆದಿತ್ತು. ಕುಮಾರ್ ಅವರು ಅನಂತ್ ಸಿಂಗ್ ಅವರ ಚುನಾವಣಾ ತಂತ್ರಗಾರನಾಗಿ ಕೆಲಸ ಮಾಡಿದ್ದರು.

ABOUT THE AUTHOR

...view details