ಕರ್ನಾಟಕ

karnataka

ETV Bharat / bharat

ಚಹಾಪ್ರಿಯರಿಗೆ ಜೈಲು ಅನುಭವ ತಣಿಸುವ ಕೈದಿ ಚಾಯ್ ​ವಾಲಾ... ಎಂಬಿಎ ಪದವೀಧರನ ಯಶೋಗಾಥೆ..!

ಬಿಹಾರದ ಮುಜಾಫರ್ ನಗರದಲ್ಲಿ ಕೈದಿ ಚಾಯ್​​ವಾಲಾ ಟೀ ಅಂಗಡಿಯೂ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚಹಾಪ್ರಿಯರ ಗಮನ ಸೆಳೆಯುತ್ತಿದೆ.

Kaidi chaiwala
ಕೈದಿ ಚಾಯ್​​ವಾಲಾ

By

Published : Dec 13, 2022, 12:58 PM IST

ಮುಜಾಫರ್​ಪುರ(ಬಿಹಾರ):ಭಾರತೀಯರು ಒಂದು ಕಪ್ ಟಿ ಸವಿದು ಅಂದಿನ ಜೀವನ ಪ್ರಾರಂಭಿಸುವುದು ರೂಢಿ. ಹಿಂದೆಯೂ ಪ್ರಧಾನಿ ಮೋದಿ ಅವರು ಬಾಲ್ಯ ಜೀವನದಲ್ಲಿ ಟೀ ಮಾರಿ ಆರಂಭದ ಜೀವನ ಸಾಗಿಸಿದ್ದು, ರಾಜಕೀಯವಾಗಿ ಬಹಳಷ್ಟು ಪ್ರಚಾರ ಪಡೆಯಿತು. ಆದರೆ, ಇತ್ತೀಚಿಗೆ ಚಹಾ ಸವಿಯುವರು ಹೆಚ್ಚಾದಂತೆ ಟೀ ಅಂಗಡಿಗಳಿಗೆ ಎಲ್ಲಿಲ್ಲಿದ ಬೇಡಿಕೆ ಶುರುವಾಗಿದೆ.

ಟಿ ಅಂಗಡಿ ಈಗ ಬ್ಯುಜಿನೆಸ್ ಟ್ರೆಂಡ್ ಆಗಿ ಹೊರಹೊಮ್ಮಿದ್ದು ವಿದ್ಯಾವಂತ ಯುವಜನರನ್ನು ಆಕರ್ಷಿಸುತ್ತಿದೆ. ಬಿಹಾರದ ಮುಜಾಫರ್ ನಗರದಲ್ಲಿಯೂ ಟಿ ಅಂಗಡಿಗಳದ್ದೇ ಜಮಾನಾ ಶುರುವಾಗಿದೆ. ವಿದ್ಯಾವಂತರ ನಡುವೆ ಚಾಯ್‌ವಾಲಾ ಆಗಲು ಪೈಪೋಟಿ ನಡೆಯುತ್ತಿದೆ. ಮೊದಲು ಎಂಬಿಎ ಚಾಯ್​ವಾಲಾ, ಗ್ರ್ಯಾಜುಯೇಟ್​ ಚಾಯ್​ವಾಲಾ ನಗರದ ಮೂಲೆ ಮೂಲೆಯಲ್ಲಿ ತೆರೆದು ಬ್ರ್ಯಾಂಡ್ ಸೃಷ್ಟಿಸಿದ್ದವು. ಇವುಗಳ ನಂತರ ಈಗ ಕೈದಿ ಚಾಯ್​​ವಾಲಾ ಟೀ ಅಂಗಡಿಯೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ.

ಕೈದಿ ಚಾಯ್​ವಾಲಾ ವಿಶೇಷ:ಎಂಬಿಎ ಚಾಯ್​ವಾಲಾ ಗೆ ಕೈದಿ ಚಾಯ್‌ವಾಲಾ ಬ್ರ್ಯಾಂಡ್ ಬಿರುಸಿನ ಪೈಪೋಟಿ ನೀಡುತ್ತಿದೆ. ಕೈದಿ ಚಾಯ್‌ವಾಲಾ ಮಳಿಗೆ ಜೈಲಿನ ಲಾಕಪ್‌ನಂತೆ ವಿನ್ಯಾಸಗೊಳಿಸಲಾಗಿದೆ. ಅಂಗಡಿಯ ಕ್ಯಾಬಿನ್ ಸುತ್ತಲೂ ಕಬ್ಬಿಣದ ರಸ್ತೆ ಅಳವಡಿಸಲಾಗಿದೆ. ಹೀಗಾಗಿ ಕೈದಿ ಚಾಯ್​ವಾಲಾ ಗೆ ಬಹಳಷ್ಟು ಚಹಾಪ್ರಿಯರು ಮನಸೋತು ಲಾಕ್ಆಪ್ ಕೋಣೆಗೆ ಆಗಮಿಸುತ್ತಿದ್ದಾರೆ. ಆದರೆ, ಒಂದು ಕಪ್ ಚಹಾ ಹೀರಲು ಚಹಾಪ್ರಿಯರಿಗೆ ಇದೂ ಜೈಲು ತರಹ ಅನುಭವ,ರೋಮಾಂಚನವನ್ನೂ ನೀಡುತ್ತಿದೆ.

ಎಂಬಿಎ ಪದವೀಧರ ಮಾಲೀಕ:ತಾನು ಎಂಬಿಎ ಓದಿದ್ದು, ಹೊಸದೇನಾದರೂ ಮಾಡಬೇಕು ಎಂಬ ಆಸೆಯಿಂದ ಕೈದಿ ಚಾಯ್​ವಾಲಾ ಎಂಬ ಟೀ ಅಂಗಡಿ ಆರಂಭಿಸಿರುವೆ ಎನ್ನುತ್ತಾರೆ ಅನಿಕೇತ್ ಕುಮಾರ್. ಈ ಅಂಗಡಿಗೆ ಬಂದವರು ಜೈಲಿನಲ್ಲಿ ಕುಳಿತು ಟೀ ಕುಡಿದು ಖುಷಿ ಪಡುತ್ತಿದ್ದಾರೆ. ಅಂಗಡಿ ಆರಂಭಿಸಿ ನಾಲ್ಕು ತಿಂಗಳಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸರಕಾರಿ ಕೆಲಸ ಮಾಡುವುದು ಮುಖ್ಯವಲ್ಲ. ಸ್ವಂತ ಉದ್ದಿಮೆ ಆರಂಭಿಸಬಹುದು. ನಿಮ್ಮ ಗುರಿ ಸ್ಪಷ್ಟವಾಗಿರಬೇಕು ಅಷ್ಟೇ ಎಂದು ಯುವಜನರಿಗೆ ಸಂದೇಶ ನೀಡುತ್ತಾರೆ.ಚಹಾ ಕುಡಿಯಲು ಜನರು ದೂರದೂರುಗಳಿಂದ ಇಲ್ಲಿಗೆ ಆಗಮಿಸುತ್ತಿದ್ದು, ಅಂಗಡಿಯಲ್ಲಿ 40 ವಿಧದ ಚಹಾ ಲಭ್ಯವಿದೆ.

ಇದನ್ನೂಓದಿ:ಉತ್ತಮ ನಿದ್ರೆಯ ರಹಸ್ಯಗಳನ್ನ ಕಂಡು ಹಿಡಿದ ಟ್ಸುಕುಬಾ ವಿಶ್ವವಿದ್ಯಾನಿಲಯ

ABOUT THE AUTHOR

...view details