ಮುಜಾಫರ್ಪುರ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಮತ್ತು ರಕ್ಷಣೆಗಾಗಿ ಬಿಹಾರದ ಮುಜಾಫರ್ಪುರದ ಮಹಿಳೆಯರು ಮತ್ತು ಯುವತಿಯರು ವಿಭಿನ್ನ ರೀತಿಯ ಚಳವಳಿ ಆರಂಭಿಸಿದ್ದಾರೆ.
ಇಲ್ಲಿನ ಪಟಾಹಿನ್‌ನ ತೆರೆದ ಮೈದಾನದಲ್ಲಿ ಮಹಿಳೆಯರು ಮತ್ತು ಯುವತಿಯರು ಕೊರಿಯುವ ಚಳಿಯಲ್ಲಿ ಮಲಗುವ ಮೂಲಕ ಮಹಿಳೆಯರ ದೌರ್ಜನ್ಯ ಮತ್ತು ರಕ್ಷಣೆಗಾಗಿ 'ಮೀಟ್ ಟು ಸ್ಲೀಪ್' ಚಳವಳಿಯನ್ನು ಹಮ್ಮಿಕೊಂಡಿದ್ದಾರೆ.
ಚಳವಳಿಯ ಮುಖ್ಯಸ್ಥರಾಗಿರುವ ವಂದನಾ ಶರ್ಮಾ, ಡಿಸೆಂಬರ್ 16 ರ ನಿರ್ಭಯಾ ಘಟನೆ ಜನರ ಕಹಿ ನೆನಪಿಂದ ಇನ್ನೂ ಮಾಸಿಲ್ಲ. ಆ ಘಟನೆಯ ನಂತರವೂ ಹಲವಾರು ಘಟನೆಗಳು ವರದಿಯಾಗಿವೆ ಎಂದರು.
ಮಹಿಳೆಯರು ಮತ್ತು ಮಕ್ಕಳು ಇನ್ನೂ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಇಂತಹ ಅಹಿತಕರ ಘಟನೆಗಳಿಂದ ಬಳಲುತ್ತಿದ್ದಾರೆ. ಬಹಿರಂಗವಾಗಿ ಮಲಗುವ ಚಳವಳಿ ಮೂಲಕ ಭಾರತವನ್ನು ಎಲ್ಲರಿಗೂ ಸುರಕ್ಷಿತ ಸ್ಥಳವನ್ನಾಗಿ ಮಾಡಲು ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಮುಜಾಫರ್ಪುರ್ ಮತ್ತು ಸುತ್ತಮುತ್ತಲಿನ ವಿವಿಧ ಪ್ರದೇಶಗಳ ಮಹಿಳೆಯರು ಈ ಆಂದೋಲನದಲ್ಲಿ ಭಾಗಿಯಾದರು.