ಕರ್ನಾಟಕ

karnataka

ETV Bharat / bharat

ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಗೆ ಫೋನ್‌ನಲ್ಲೇ ತ್ರಿವಳಿ ತಲಾಖ್‌ ನೀಡಿದ ಗಂಡ - ಎಸ್‌ಎಚ್‌ ಒ ಲಕ್ಷ್ಮಿ ಪಟೇಲ್

ಅನೈತಿಕ ಚಟುವಟಿಕೆಯನ್ನು ವಿಚಾರಿಸಲು ಸಂಪರ್ಕಿಸಿದಾಗ ಅವರು ನನ್ನನ್ನು ನಿಂದಿಸಿದ್ದಲ್ಲದೆ, ಪೋನ್​ ಕರೆಯಲ್ಲೇ ಮೂರು ಬಾರಿ ತಲಾಖ್ ನೀಡಿ ಮನೆಯಿಂದ ಹೊರಹೋಗಬೇಕು ಎಂದು ಹೇಳಿದ್ದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

Bihar woman gets triple talaq over phone case lodged
ಪಾಟ್ನಾ: ಪೋನ್​ ಕಾಲ್​ಲ್ಲೆ ತ್ರಿವಳಿ ತಲಾಖ್​

By

Published : Nov 24, 2022, 1:22 PM IST

ಪಾಟ್ನಾ: ಬಿಹಾರದ ರೋಹ್ತಾಸ್ ಜಿಲ್ಲೆಯ ಮಹಿಳೆಯೊಬ್ಬರು, ಪತಿ ದೂರವಾಣಿ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ತರುನ್ನುಮ್ ಎಂಬ ಸಂತ್ರಸ್ತೆ ಪ್ರಕರಣದಲ್ಲಿ ನ್ಯಾಯ ಕೋರಿ ರೋಹ್ತಾಸ್‌ನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಫೋನ್‌ ಮೂಲಕ ತ್ರಿವಳಿ ತಲಾಖ್‌, ದೂರಿನ ವಿವರ: ಮೇ 30, 2014 ರಂದು ನಾನು ಶೋಯೆಬ್‌ ಅವರನ್ನು ವಿವಾಹವಾದೆ. ಅವರು ನನ್ನನ್ನು ರಾಂಚಿಗೆ ಕರೆದುಕೊಂಡು ಹೋಗಿದ್ದರು. ದಿನ ಕಳೆದಂತೆ ನನ್ನೊಂದಿಗೆ ಕೆಟ್ಟದ್ದಾಗಿ ವರ್ತಿಸತೊಡಗಿದರು. ಬೇರೆ ಯುವತಿಯರನ್ನೂ ಮನೆಗೆ ಕರೆದುಕೊಂಡು ಬರುತ್ತಿದ್ದರು. ನನ್ನನ್ನೇ ಮನೆಯಿಂದ ಕೆಲವು ಗಂಟೆಗಳ ತನಕ ಹೊರಗಿರಲು ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತ ನಾನು 10 ದಿನ ನಾನು ರಾಂಚಿಯಲ್ಲಿದ್ದು, ಬಳಿಕ ರೋಹ್ತಾಸ್‌ಗೆ ಹಿಂತಿರುಗಿ ಶೋಯಬ್​ನ ತಾಯಿಗೆ ಈ ವಿಷಯ ತಿಳಿಸಿದೆ. ಅವರು ಪತಿಯನ್ನು ಸರಿದಾರಿಗೆ ತರುತ್ತೇನೆ ಎಂದು ಹೇಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇದಾದ ನಂತರದಲ್ಲಿ ಪತಿ ರಾಂಚಿಯಲ್ಲೇ ಬೇರೆ ಯುವತಿಯನ್ನು ಮದುವೆಯಾಗಿದ್ದರೂ ನನಗೆ ಗೊತ್ತಾಗಲಿಲ್ಲ. ನನ್ನ ಕೆಲವು ಸಂಬಂಧಿಕರು ರೋಹ್ತಾಸ್ ಜಿಲ್ಲೆಯ ಡೆಹ್ರಿ ಪಟ್ಟಣದ ನೀಲ್ ಕೋಠಿ ಪ್ರದೇಶಕ್ಕೆ ಬಂದಾಗ, ಯಾಕೆ ನೀನು ಈ ಕೃತ್ಯವನ್ನು ವಿರೋಧಿಸಲಿಲ್ಲ ಎಂದಿದ್ದರು. ಇದರಿಂದ ನಾನು ಅನೈತಿಕ ಚಟುವಟಿಕೆಯನ್ನು ವಿಚಾರಿಸಲು ಪತಿಯನ್ನೇ ಸಂಪರ್ಕಿಸಿದಾಗ ಅವರು ನನ್ನನ್ನು ನಿಂದಿಸಿದ್ದಲ್ಲದೆ, ಪೋನ್​ ಕಾಲ​ಲ್ಲೇ ಮೂರು ಬಾರಿ ತಲಾಖ್ ಜೊತೆಗೆ ಅವರ ಮನೆಯಿಂದಲೇ ಹೊರಹೋಗಬೇಕು ಎಂದು ಹೇಳಿ ಫೋನ್ ಸಂಪರ್ಕ ಕಡಿತಗೊಳಿಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ; ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ: 25 ಲಕ್ಷ ರೂ. ಧೋಖಾ

ABOUT THE AUTHOR

...view details