ಕರ್ನಾಟಕ

karnataka

ETV Bharat / bharat

ಅರುಣಾಚಲ ಪ್ರದೇಶದಲ್ಲಿ ಯೋಧನ ಕೊಲೆ: ಸಹೋದ್ಯೋಗಿ ಮೇಲೆ ಶಂಕೆ - ಬಿಹಾರದ ಯೋಧನ ಸಾವು

ಅರುಣಾಚಲ ಪ್ರದೇಶದಲ್ಲಿ ಬಿಹಾರದ ಭೋಜ್‌ಪುರ ಜಿಲ್ಲೆಯ ನಿವಾಸಿ, ಸಶಸ್ತ್ರ ಸೀಮಾ ಬಲದ ಯೋಧ ಕೊಲೆಗೀಡಾಗಿದ್ದಾರೆ.

bihar-ssb-soldier -murder-in-arunachal-pradesh
ಅರುಣಾಚಲ ಪ್ರದೇಶದಲ್ಲಿ ಯೋಧನ ಕೊಲೆ

By

Published : Feb 17, 2023, 9:26 PM IST

ಭೋಜ್‌ಪುರ (ಬಿಹಾರ): ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಯೋಧರೊಬ್ಬರನ್ನು ಹತ್ಯೆ ಮಾಡಲಾಗಿದೆ. ಈ ಕೊಲೆಯನ್ನು ಸಹೋದ್ಯೋಗಿಯೇ ಮಾಡಿರುವ ಆರೋಪ ಕೇಳಿ ಬಂದಿದೆ. ಇತ್ತ, ಸಾವಿನ ವಿಷಯ ತಿಳಿದ ಯೋಧನ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದ್ದು, ಪಾರ್ಥಿವ ಶರೀರ ಶನಿವಾರ ಸ್ವಗ್ರಾಮಕ್ಕೆ ತಲುಪಲಿದೆ ಎಂದು ಹೇಳಲಾಗುತ್ತಿದೆ.

32 ವರ್ಷದ ರಾಕೇಶ್ ಕುಮಾರ್​ ಕೊಲೆಯಾದ ಯೋಧ. ಭೋಜ್‌ಪುರ ಜಿಲ್ಲೆಯ ಬರ್ಹರಾ ಸಮೀಪದ ಪದ್ಮಿನಿಯನ್ ಗ್ರಾಮದ ನಿವಾಸಿ ರಾಕೇಶ್​ ಕಳೆದ 12 ವರ್ಷಗಳಿಂದ ಸಶಸ್ತ್ರ ಸೀಮಾ ಬಲ (ಎಸ್​​ಎಸ್​ಬಿ)ದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಅರುಣಾಚಲ ಪ್ರದೇಶದಲ್ಲಿ ಗಡಿ ಭದ್ರತಾ ಪಡೆಯ ಮೆಸ್ ಉಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ:350 ಪೊಲೀಸರಿಂದ ಶೋಧ! 6 ದಿನದ ಬಳಿಕ ಪತ್ತೆಯಾಯ್ತು ಕೊಲೆಯಾದ ಉದ್ಯಮಿಯ ಶವ

ರಾಕೇಶ್ ಕುಮಾರ್​ ತಮ್ಮದೇ ರಾಜ್ಯದ ಅರಾರಿಯಾ ಜಿಲ್ಲೆಯ ಮತ್ತೊಬ್ಬ ಯೋಧನೊಂದಿಗೆ ಕಲಹ ಹೊಂದಿದ್ದರು. ಈತನೇ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯೋಧ ರಾಕೇಶ್ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ದೇಹದ ಹಲವೆಡೆ ಗಾಯದ ಗುರುತುಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಮೃತ ಯೋಧನ ಚಿಕ್ಕಪ್ಪ ತ್ರಿಲೋಕಿ ಯಾದವ್ ತಿಳಿಸಿದ್ದಾರೆ.

ಅರಾರಿಯಾ ಜಿಲ್ಲೆಯ ಸಹೋದ್ಯೋಗಿಯೊಂದಿಗೆ ರಾಕೇಶ್​ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಒಂದೂವರೆ ವರ್ಷದ ಹಿಂದೆ ರಾಕೇಶ್ ಜೊತೆ ದಾನಪುರದಲ್ಲಿ ಈತ ಕೆಲಸ ಮಾಡುತ್ತಿದ್ದ. ಆ ಸಮಯದಲ್ಲೂ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದಾದ ನಂತರ ಎಲ್ಲವೂ ಸರಿಯಾಗಿತ್ತು. ಈಗ ಮತ್ತೆ ಇಬ್ಬರ ಏನಾಗಿದೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

2011ರಲ್ಲಿ ಸೇನೆಗೆ ಆಯ್ಕೆಯಾಗಿದ್ದ ರಾಕೇಶ್ ಕುಮಾರ್, 2013ರಲ್ಲಿ ವಿವಾಹವಾಗಿದ್ದರು. ಸದ್ಯ ಇವರಿಗೆ ನಾಲ್ಕು ವರ್ಷದ ಮಗ ಇದ್ದಾನೆ. ಮಗನೊಂದಿಗೆ ಪತ್ನಿ, ತಾಯಿ, ಸಹೋದರ, ಸಹೋದರಿಯನ್ನು ಯೋಧ ಅಗಲಿದ್ದಾರೆ. ಮತ್ತೊಂದೆಡೆ, ರಾಕೇಶ್ ಸಾವಿನ ವಿಷಯ ತಿಳಿದು ಕುಟುಂಬದ ಸಂಬಂಧಿಗಳು, ಬಂಧು ಬಳಗ ಮನೆಗೆ ಆಗಮಿಸಿದ್ದು, ಪಾರ್ಥಿವ ಶರೀರದ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಇತ್ತೀಚೆಗೆ ತಮಿಳುನಾಡು ಯೋಧನ ಕೊಲೆ:ಇತ್ತೀಚೆಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ರಜೆ ಮೇಲಿದ್ದ ಬಂದಿದ್ದ ಯೋಧ, ಲ್ಯಾನ್ಸ್​ ನಾಯ್ಕ್​​ ಪ್ರಭು ಹತ್ಯೆ ಮಾಡಲಾಗಿತ್ತು. ಫೆಬ್ರವರಿ 8ರಂದು ಇಲ್ಲಿನ ಬೊಚಂಪಲ್ಲಿ ಮೂಲದ ನಿವಾಸಿಯಾದ ಪ್ರಭು ಕುಟುಂಬಸ್ಥರು ಮತ್ತು ಸಂಬಂಧಿಕರ ಮಧ್ಯೆ ಪಂಚಾಯಿತಿಯ ಸಾರ್ವಜನಿಕ ನೀರಿನ ಟ್ಯಾಂಕ್​ ಸಮೀಪ ಬಟ್ಟೆ ತೊಳೆಯುವ ವಿಚಾರವಾಗಿ ಗಲಾಟೆ ಉಂಟಾಗಿತ್ತು.

ಇದೇ ವೇಳೆ ಯೋಧ ಪ್ರಭು ಮತ್ತು ಸಹೋದರ ಪ್ರಭಾಕರನ್​ ಅವರೊಂದಿಗೆ ಆರೋಪಿಯಾದ ಸಂಬಂಧಿಯೂ ಆಗಿರುವ ಡಿಎಂಕೆ ಮುಖಂಡ ಚಿನ್ನಸ್ವಾಮಿ ಮತ್ತು ಆತನ ಸಹಚರರು ಸೇರಿಕೊಂಡು ಹಲ್ಲೆ ಮಾಡಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಯೋಧ ಪ್ರಭು ಫೆಬ್ರವರಿ 14ರಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.

ಇದನ್ನೂ ಓದಿ:ಬಟ್ಟೆ ತೊಳೆಯುವ ವಿಚಾರಕ್ಕೆ ಗಲಾಟೆ: ಕೃಷ್ಣಗಿರಿಯಲ್ಲಿ ಯೋಧನ ಹೊಡೆದು ಹತ್ಯೆ

ABOUT THE AUTHOR

...view details