ನವಾಡ (ಬಿಹಾರ): ಬಿಹಾರದ ನವಾಡ ಜಿಲ್ಲೆಯ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿ, ನರಕಯಾತನೆ ಅನುಭವಿಸುತ್ತಿದ್ದ ಬಾಲಕಿ ಜೀವನದಲ್ಲಿ ನಟ ಸೋನು ಸೂದ್ ಅವರ ಸಹಾಯ ಹೊಸ ಬೆಳಕು ಮೂಡಿಸಿದೆ. ಸೋನು ಸೂದ್ ಅವರ ಈ ನೆರವಿಗೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ತಮ್ಮ ಕಿರಿಯ ಮಗಳು ಚೌಮುಖಿ ಕುಮಾರಿಗೆ ಆಪರೇಷನ್ ಮಾಡಿಸಿದ್ದಕ್ಕಾಗಿ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಬಾಲಕಿ ಚೌಮುಖಿಯ ಸಂಕಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯ ಬಾಲಿವುಡ್ ನಟ ಸೋನು ಸೂದ್ ತಲುಪಿದ ನಂತರ ಆಕೆಯನ್ನು ಮುಂಬೈಗೆ ಕರೆತರುವಂತೆ ಪೋಷಕರನ್ನು ಕೇಳಿಕೊಂಡಿದ್ದರು. ಬಾಲಕಿಯನ್ನು ಮುಂಬೈನಲ್ಲಿ ವೈದ್ಯರು ಪರೀಕ್ಷಿಸಿದರು. ನಂತರ ಅವರು ಸೂರತ್‌ನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರು. ಈಗ ಬಾಲಕಿ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದೆ. ಈ ಬಗ್ಗೆ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದನ್ನು ರೀ ಟ್ವೀಟ್ ಮಾಡಿರುವ ಸೂದ್, ಬಾಲಕಿಯನ್ನು ಹರಸಿದ್ದಾರೆ.