ಭಾಗಲ್ಪುರ(ಬಿಹಾರ):ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬರನ್ನು ಹರಿತವಾದ ಆಯುಧದಿಂದ ಕೈ, ಕಾಲು, ಸ್ತನಗಳನ್ನು ಕತ್ತರಿಸಿ ಕೊಲೆ ಮಾಡಲಾಗಿದೆ. ಕಳೆದ ಶನಿವಾರ ಸಂಜೆ ಮಹಿಳೆ ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಮಹಿಳೆ ಮೇಲೆ ಕಣ್ಣಿಟ್ಟಿದ್ದ ಹಂತಕ: ಮಾಹಿತಿ ಪ್ರಕಾರ ಮೃತ ನೀಲಂದೇವಿ (42) ಎಂಬಾ ಮಹಿಳೆ ಮೇಲೆ ಕೊಲೆ ಆರೋಪಿ ಶಕೀಲ್ ಕಣ್ಣು ಬಿದ್ದಿತ್ತು. ಇದೇ ವಿಚಾರವಾಗಿ ತಿಂಗಳ ಹಿಂದೆ ಇಬ್ಬರ ಮಧ್ಯೆ ಜಗಳವಾಗಿತ್ತು. ಡಿಸೆಂಬರ್ 3ರಂದು, ಅಂದ್ರೆ ಕಳೆದ ಶನಿವಾರ ಸಂಜೆ 6.30 ರ ಸುಮಾರಿಗೆ ಪಿರಪೈಂಟಿ ಮಾರುಕಟ್ಟೆಯಿಂದ ನೀಲಂದೇವಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಆರೋಪಿ ಶಕೀಲ್ ಮಹಿಳೆಯ ಹಿಂಬದಿಯಿಂದ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಕೈ, ಕಾಲು, ಸ್ತನಗಳನ್ನು ಕತ್ತರಿಸಿದ್ದಾನೆ. ದಾಳಿಯಲ್ಲಿ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.
ಚಿಕಿತ್ಸೆ ವೇಳೆ ಮಹಿಳೆ ಸಾವು: ಹಲ್ಲೆಯಿಂದ ಗಾಯಗೊಂಡ ಮಹಿಳೆಯನ್ನು ಮೊದಲು ಪಿರಪೈಂಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಗಂಭೀರ ಸ್ಥಿತಿಯನ್ನು ಕಂಡು ಉತ್ತಮ ಚಿಕಿತ್ಸೆಗಾಗಿ ಪಂಡಿತ್ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ಘೋಷಿಸಿದರು.