ಕರ್ನಾಟಕ

karnataka

ETV Bharat / bharat

ಶಿಕ್ಷಕ ಅಭ್ಯರ್ಥಿಗಳಿಂದ ಬೃಹತ್​ ಪ್ರತಿಭಟನೆ, ಪೊಲೀಸರಿಂದ ಲಾಠಿ ಚಾರ್ಜ್: ಹಲವರ ಬಂಧನ.. - ಪ್ರತಿಭಟನಾ ಮೆರವಣಿಗೆ

ಬಿಹಾರದ ಪಾಟ್ನಾದಲ್ಲಿ ವಾಸಸ್ಥಳ ನೀತಿ ಜಾರಿಗೆ ತರಲು ಒತ್ತಾಯಿಸಿ ಭಾರೀ ಗದ್ದಲ ನಡೆದಿದೆ. ಬಿಹಾರದಾದ್ಯಂತದ ಶಿಕ್ಷಕ ಅಭ್ಯರ್ಥಿಗಳು ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲು ರಾಜಧಾನಿ ಪಾಟ್ನಾದ ಗಾಂಧಿ ಮೈದಾನವನ್ನು ತಲುಪಿದ್ದರು. ತಕ್ಷಣ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಭ್ಯರ್ಥಿಗಳನ್ನು ಓಡಿಸಿದರು. ಈ ವೇಳೆ ಅಭ್ಯರ್ಥಿಗಳು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದರು. ಸುಮಾರು 20 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ.

lathi charge on teacher candidates In patna
ಶಿಕ್ಷಕ ಅಭ್ಯರ್ಥಿಗಳಿಂದ ಬೃಹತ್​ ಪ್ರತಿಭಟನೆ

By

Published : Jul 1, 2023, 4:37 PM IST

ಪಾಟ್ನಾ (ಬಿಹಾರ):ಶಿಕ್ಷಕರ ನೇಮಕಾತಿಯಲ್ಲಿ ವಾಸಸ್ಥಳ ನೀತಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಸಾವಿರಾರು ಶಿಕ್ಷಕ ಅಭ್ಯರ್ಥಿಗಳು ಪಾಟ್ನಾದಲ್ಲಿ ಬೀದಿಗಿಳಿದಿದ್ದಾರೆ. ಶಿಕ್ಷಕ ಅಭ್ಯರ್ಥಿಗಳು ಗಾಂಧಿ ಮೈದಾನದ ಗೇಟ್ ಸಂಖ್ಯೆ 4ರಿಂದ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಕಾಲ್ನಡಿಗೆ ಮೆರವಣಿಗೆಯ ಮೂಲಕ ರಾಜಭವನದ ಕಡೆಗೆ ಆರಂಭಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಜೆ.ಪಿ. ಗೋಲಂಬರ್‌ನಲ್ಲಿಯೇ ಪೊಲೀಸರು ತಡೆದರು.

ಪಾಟ್ನಾದಲ್ಲಿ ಶಿಕ್ಷಕ ಅಭ್ಯರ್ಥಿಗಳ ಮೇಲೆ ಲಾಠಿಚಾರ್ಜ್:ಸಾವಿರಾರು ಅಭ್ಯರ್ಥಿಗಳ ಪ್ರತಿಭಟನಾ ಮೆರವಣಿಗೆಯು ಮೂಲಕ ಜೆ.ಪಿ. ಗೋಲಂಬರ್​ ಪ್ರದೇಶಕ್ಕೆ ಬಂದಿತ್ತು. ಈ ಭಾಗದಲ್ಲಿ ಪೊಲೀಸ್ ಪಡೆಗಳು ಕಾವಲಿಕಾಗಾಗಿ ನಿಂತಿದ್ದವು. ಬೃಹತ್ ಪ್ರತಿಭಟನಾ ಮೆರವಣಿಗೆ ಹಿನ್ನೆಲೆ ಸಂಚಾರ ಅಸ್ತವ್ಯಸ್ತಗೊಂಡಿದೆ. ತಕ್ಷಣ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಭ್ಯರ್ಥಿಗಳನ್ನು ಓಡಿಸಿದರು. ಈ ವೇಳೆ, ಅಭ್ಯರ್ಥಿಗಳು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದರು. ಸುಮಾರು 20 ಅಭ್ಯರ್ಥಿಗಳನ್ನು ಬಂಧಿಸಿದರು. ವಾಸಸ್ಥಳ ನೀತಿ ಜಾರಿಯಾಗುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಶಿಕ್ಷಕ ಅಭ್ಯರ್ಥಿಗಳು ಬಹಿರಂಗವಾಗಿ ಘೋಷಣೆ ಮಾಡಿದರು.

ಶಿಕ್ಷಕರ ಒಕ್ಕೂಟದ ವಿದ್ಯಾರ್ಥಿ ನಾಯಕ ದೀಪಂಕರ್ ಮಾತನಾಡಿ, "ವಾಸಸ್ಥಳ ವ್ಯವಸ್ಥೆಯನ್ನು ಏಕೆ ರದ್ದುಗೊಳಿಸಲಾಯಿತು, ಅದನ್ನು ಮಾಡಬಾರದಿತ್ತು. ಇದರಿಂದ ನಾವು ಬಲವಂತವಾಗಿ ರಸ್ತೆಗೆ ಬರಬೇಕಾಗಿದೆ. ವಾಸಸ್ಥಳ ನೀತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ, ಬಿಹಾರದ ಜನರ ಹಕ್ಕುಗಳನ್ನು ಕಸಿದುಕೊಂಡಂತೆ ಆಗುತ್ತದೆ" ಎಂದು ಕಿಡಿಕಾಡಿದರು.

ಪ್ರಜಾಸತ್ತಾತ್ಮಕ ರೀತಿಯಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆ ಮತ್ತು ಹೋರಾಟ ನಡೆಸುತ್ತಿದ್ದೇವೆ. ಇದಕ್ಕಾಗಿ ರಸ್ತೆಗಿಳಿದಿದ್ದಾರೆ. ಅವರು ಸರ್ಕಾರಕ್ಕೆ 72 ಗಂಟೆಗಳ ಸಮಯವನ್ನು ನೀಡಿದ್ದೆವು. ಆದರೆ, ಈ ಅವಧಿಯಲ್ಲಿ ವಾಸಸ್ಥಳ ನೀತಿ ಜಾರಿಗೊಳಿಸಲಿಲ್ಲ. ಇದರಿಂದ ನಾವು ಗಾಂಧೀಜಿ ಅವರ ಹೋರಾಟದ ಮಾರ್ಗದಲ್ಲಿ ಆಂದೋಲನ ನಡೆಸುತ್ತಿದ್ದೇವೆ. ಆದಷ್ಟು ಬೇಗ ವಾಸಸ್ಥಳ ನೀತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಶಿಕ್ಷಕ ಅಭ್ಯರ್ಥಿ ಕುಂದನ್ ಆಗ್ರಹಿಸಿದರು.

‘ಸರ್ಕಾರದಿಂದ ಅನ್ಯಾಯ’: ಶಿಕ್ಷಕಿ ಅಭ್ಯರ್ಥಿ ಚಾಂದಿನಿ ಮಾತನಾಡಿ, ಜನರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಪ್ರಾಥಮಿಕ ಶಿಕ್ಷಕರು ಸ್ಥಳೀಯರಾಗಿರಬೇಕು ಹೊರತು ಬೇರೆ ರಾಜ್ಯಗಳಿಂದಲ್ಲ. ಪ್ರಾಥಮಿಕ ಶಿಕ್ಷಕರು ಸ್ಥಳೀಯರಾಗಿರಬೇಕು ಇದರಿಂದ ಅವರು ಸ್ಥಳೀಯ ಭಾಷೆಯಲ್ಲಿ ಮಕ್ಕಳಿಗೆ ಕಲಿಸಲು ಮತ್ತು ವಿವರಿಸಲು ಸಾಧ್ಯವಾಗುತ್ತದೆ. ಭೋಜ್‌ಪುರಿ, ಮೈಥಿಲಿ, ಮಾಗಾಹಿಯಂತಹ ಭಾಷೆಯಲ್ಲಿ ಮಕ್ಕಳಿಗೆ ಕಲಿಸುವ ಮೂಲಕ ಕಲಿಸಬಹುದು ಎಂದರು.

"ನಮಗೆ ವಾಸಸ್ಥಳ ನೀತಿಯ ಅಗತ್ಯವಿದೆ. ಇಷ್ಟು ವರ್ಷಗಳಿಂದ ಪರೀಕ್ಷೆಯನ್ನು ನಡೆಸಲಾಗಿಲ್ಲ. ಇದರಿಂದ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಬಿಹಾರದಲ್ಲಿ ತುಂಬಾ ನಿರುದ್ಯೋಗವಿದೆ. ಇದರ ಹೊರತಾಗಿಯೂ, ದೇಶದಾದ್ಯಂತದ ಜನರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಇದು ಸರಿಯಲ್ಲ" ಎಂದು ಶಿಕ್ಷಕ ಅಭ್ಯರ್ಥಿ ಚಾಂದಿನಿ ಕುಮಾರಿ ಗರಂ ಆದರು.

ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ:ಈ ವೇಳೆ ಶಿಕ್ಷಣ ಸಚಿವ ಚಂದ್ರಶೇಖರ್ ವಿರುದ್ಧ ಅಭ್ಯರ್ಥಿಗಳ ಆಕ್ರೋಶ ಭುಗಿಲೆದ್ದಿತು. ಬಿಹಾರದಲ್ಲಿ ಉತ್ತಮ ಶಿಕ್ಷಕರಿಲ್ಲ ಎಂಬ ಹೇಳಿಕೆಗೆ ಅಭ್ಯರ್ಥಿಗಳು ಕೋಪಗೊಂಡಿದ್ದು, ತಮ್ಮ ಇಲಾಖೆಯನ್ನು ಬದಲಾಯಿಸುವಂತೆ ಒತ್ತಾಯಿಸಲಾಗುತ್ತಿದೆ. ಇದೇ ಕಾರಣಕ್ಕೆ ಪ್ರತಿಭಟನೆ ವೇಳೆ ಶಿಕ್ಷಕ ಅಭ್ಯರ್ಥಿಗಳು ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕ ಅಭ್ಯರ್ಥಿಗಳ ಮುಂದಿನ ಹೋರಾಟ:ಮುಂಗಾರು ಅಧಿವೇಶನದಲ್ಲಿ ಜುಲೈ 11 ರಂದು ಬಿಹಾರ ವಿಧಾನ ಸಭೆಗೆ ಲಕ್ಷಾಂತರ ಬಿಹಾರ ಶಿಕ್ಷಕರು ಘೇರಾವ್ ಮಾಡಲಿದ್ದಾರೆ ಎಂದು ಶಿಕ್ಷಕರ ಸಂಘ ಘೋಷಿಸಿದೆ. ಮತ್ತೊಂದೆಡೆ, ಜುಲೈ 12 ರಂದು ಪಾಟ್ನಾದಲ್ಲಿರುವ ಬಿಹಾರದ ಎಲ್ಲಾ ಶಾಸಕರ ನಿವಾಸದಲ್ಲಿ ಅವರು ತಮ್ಮ ಬೇಡಿಕೆಗಳಿಗೆ ಸಂಬಂಧಿಸಿದ ಮನವಿ ಪತ್ರವನ್ನು ಹಸ್ತಾಂತರಿಸಲಿದ್ದಾರೆ. ಇದರಿಂದ ತಮ್ಮ ಕ್ಷೇತ್ರದ ಶಾಸಕರು ತಮ್ಮ ಬೇಡಿಕೆಗಳನ್ನು ವಿಧಾನಸಭೆಯಲ್ಲಿ ಇಡುತ್ತಾರೆ. ಇದಕ್ಕೂ ಮುನ್ನ ಜುಲೈ 8ರಂದು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಕರ ಸಂಘ ಹೋರಾಟ ಸಮಿತಿ ಸಭೆ ನಡೆಸಿ ಮುಂದಿನ ಕಾರ್ಯತಂತ್ರ ಸಿದ್ಧಪಡಿಸಲಿದೆ. ಜುಲೈ 9 ರಂದು ಪಾಟ್ನಾದಲ್ಲಿ ಸಂಘದ ಸಭೆ ನಡೆಯಲಿದೆ.

ಇದನ್ನೂ ಓದಿ:Job scam: ಶಿಕ್ಷಕರ ನೇಮಕಾತಿ ಹಗರಣ; ನಟ, ನಟಿಗೆ ಆರೋಪಿ ಕುಂತಲ್ ಐಷಾರಾಮಿ ಕಾರು ಗಿಫ್ಟ್​​, ನಟಿಗೆ 11 ಗಂಟೆ ವಿಚಾರಣೆ

ABOUT THE AUTHOR

...view details