ಕರ್ನಾಟಕ

karnataka

ETV Bharat / bharat

2ನೇ ಹಂತದ ಬಿಹಾರ ವಿಧಾನಸಭಾ ಚುನಾವಣೆ: 1,463 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಇಂದು ಬಿಹಾರ ವಿಧಾನಸಭಾದ 2ನೇ ಹಂತದ ಮತದಾನ ಮುಂದುವರೆದಿದೆ. ಬಿಹಾರದಲ್ಲಿ ಮುಂದಿನ ಸರ್ಕಾರ ಯಾರದ್ದು, ಎನ್ನುವುದನ್ನು ಬಹುತೇಕ ಇಂದಿನ ಚುನಾವಣೆ ನಿರ್ಧರಿಸಲಿದ್ದು, ಒಟ್ಟು 1,463 ಅಭ್ಯರ್ಥಿಗಳ ಭವಿಷ್ಯ ಮತದಾರರ ಕೈಲಿದೆ.

today
2ನೇ ಹಂತದ ಬಿಹಾರ ವಿಧಾನಸಭಾ ಚುನಾವಣೆ

By

Published : Nov 3, 2020, 9:55 AM IST

ಪಾಟ್ನಾ: ಬಿಹಾರ ರಾಜ್ಯ ವಿಧಾನಸಭಾದ ಎರಡನೇ ಹಂತದ ಚುನಾವಣೆಯ ಮತದಾನ ಆರಂಭವಾಗಿದ್ದು, ಬಿಹಾರದ ಒಟ್ಟು 243 ವಿಧಾನಸಭಾ ಸ್ಥಾನಗಳ ಪೈಕಿ 94 ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ 2.85 ಕೋಟಿ ಮತದಾರರು 1,463 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

2ನೇ ಹಂತದ ಬಿಹಾರ ವಿಧಾನಸಭಾ ಚುನಾವಣೆ

17 ಜಿಲ್ಲೆಗಳಲ್ಲಿ ಒಟ್ಟು 41,362 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಪಾಟ್ನಾ, ಭಾಗಲ್ಪುರ್ ಮತ್ತು ನಳಂದ ಹೊರತುಪಡಿಸಿ ಉಳಿದೆಲ್ಲಾ ಮತಗಟ್ಟೆಗಳು ಗಂಗಾ ನದಿಯ ಉತ್ತರದಲ್ಲಿದೆ. ಮಹಾರಾಜ್‌ಗಂಜ್ ಗರಿಷ್ಠ 27 ಅಭ್ಯರ್ಥಿಗಳನ್ನು ಮತ್ತು ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ದಾರೌಲಾ ಕೇವಲ ನಾಲ್ಕು ಅಭ್ಯರ್ಥಿಗಳನ್ನು ಹೊಂದಿದೆ.

2ನೇ ಹಂತದ ಚುನಾವಣೆಯಲ್ಲಿ ವಿರೋಧ ಪಕ್ಷ ಆರ್​ಜೆಡಿ ನಾಯಕ, ಲಾಲೂ ಯಾದವ್ ಪುತ್ರ ತೇಜಸ್ವಿ ಯಾದವ್, ನಿತೀಶ್ ಸರ್ಕಾರದ ನಾಲ್ವರು ಸಚಿವರು, ನಟ ಶತ್ರುಘ್ನ ಸಿನ್ಹಾರ ಪುತ್ರ, ಕಾಂಗ್ರೆಸ್​ನ ಲವ್ ಸಿನ್ಹಾ ಕಣದಲ್ಲಿದ್ದಾರೆ. ಹೀಗಾಗಿ ಚುನಾವಣೆ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್ 24 ಸ್ಥಾನಗಳು, ಸಿಪಿಐ ಮತ್ತು ಸಿಪಿಎಂ ತಲಾ 4, ಲೋಕ್​​ ಜನಶಕ್ತಿ ಪಕ್ಷ 52 ಮತ್ತು ಆರ್‌ಎಲ್‌ಎಸ್‌ಪಿ 36 ಸ್ಥಾನಗಳಿಗೆ ಸ್ಪರ್ಧಿಸುತ್ತಿವೆ.ಇನ್ನು ಬಿಜೆಪಿ 46 ಸ್ಥಾನಗಳು ಮತ್ತು ಜೆಡಿಯು 43 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದುವರೆಗೂ ಶೇ 8 ಕ್ಕಿಂತ ಹೆಚ್ಚು ಮತದಾನವಾಗಿದೆ.

ABOUT THE AUTHOR

...view details