ಕರ್ನಾಟಕ

karnataka

ETV Bharat / bharat

ಮಗನ ಶವ ನೀಡಲು ₹50 ಸಾವಿರಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ.. ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿರುವ ದಂಪತಿ!

ಸರ್ಕಾರಿ ಆಸ್ಪತ್ರೆಯಲ್ಲಿರುವ ಮಗನ ಮೃತದೇಹ ಪಡೆದುಕೊಳ್ಳಲು 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿರುವ ಪ್ರಕರಣ ಬಿಹಾರದಲ್ಲಿ ಕೇಳಿ ಬಂದಿದ್ದು, ಬಡ ದಂಪತಿ ಇದೀಗ ಮನೆ ಮನೆಗೆ ತೆರಳಿ ಭಿಕ್ಷೆ ಕೇಳುತ್ತಿದ್ದಾರೆ.

Bihar Couple Begs For Money
Bihar Couple Begs For Money

By

Published : Jun 9, 2022, 9:41 AM IST

Updated : Jun 9, 2022, 11:38 AM IST

ಸಮಸ್ತೀಪುರ(ಬಿಹಾರ):ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನೂರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆಗಳು ನಮ್ಮ ಕಣ್ಮುಂದೆ ನಡೆದಿವೆ. ಇದರ ಮಧ್ಯೆ ಚಿಕಿತ್ಸೆ ನೀಡಲು ಲಂಚ ಕೇಳುವ ಪ್ರಕರಣ ಸಹ ನಡೆದಿವೆ. ಇದೀಗ ಮೃತ ಮಗನ ಶವ ನೀಡಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ 50 ಸಾವಿರ ರೂಪಾಯಿ ಲಂಚ ಕೇಳಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ, ಬಡ ದಂಪತಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿದೆ.

ಮಗನ ಶವ ನೀಡಲು ₹50 ಸಾವಿರಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ.. ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿರುವ ದಂಪತಿ!

ಬಿಹಾರದ ಸಮಸ್ತೀಪುರದಲ್ಲಿ ಈ ಘಟನೆ ನಡೆದಿದ್ದು, ಮಗನ ಮೃತದೇಹ ನೀಡಲು ಸದರ್​ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೊಬ್ಬ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಇಷ್ಟೊಂದು ಹಣ ಇಲ್ಲದ ಕಾರಣ ಬಡ ದಂಪತಿ ಮನೆ ಮನೆಗೆ ತೆರಳಿ, ಭಿಕ್ಷೆ ಬೇಡುತ್ತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಏನಿದು ಪ್ರಕರಣ?: ಕಳೆದ ಕೆಲ ದಿನಗಳ ಹಿಂದೆ ಬಡ ದಂಪತಿ ಮಗ ಮನೆಯಿಂದ ಕಾಣೆಯಾಗಿದ್ದನು. ಇದಾದ ಬಳಿಕ ಆತನ ಮೃತದೇಹ ಸಮಸ್ತೀಪುರ ಸದರ್​ ಆಸ್ಪತ್ರೆಯಲ್ಲಿದೆ ಎಂದು ದಂಪತಿಗೆ ಕರೆ ಬಂದಿದೆ. ಶವ ಪಡೆದುಕೊಳ್ಳಲು ಅಲ್ಲಿಗೆ ಹೋದಾಗ 50 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ. ನಾವು ಬಡವರಾಗಿದ್ದು, ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ಕೇಳಿಕೊಂಡಿರುವ ಹೊರತಾಗಿ ಕೂಡ ಇವರ ಮಾತನ್ನು ಸಿಬ್ಬಂದಿ ಕೇಳಿಲ್ಲ. ಹೀಗಾಗಿ, ಹಣ ಹೊಂದಿಸಲು ಮನೆ ಮನೆಗೆ ತೆರಳಿ ಭಿಕ್ಷೆ ಕೇಳುತ್ತಿದ್ದಾರೆ.

ಇದನ್ನೂಓದಿ:ತಾಯಿ, ಮಗು ಎರಡಕ್ಕೂ ಗಾಯ; ಮರಿಯನ್ನು ಎದೆಗವಚಿ ಕ್ಲಿನಿಕ್‌ ಮುಂದೆ ಕುಳಿತ ಕೋತಿ

ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿ ಗುತ್ತಿಗೆ ಆದಾರದ ಮೇಲೆ ದುಡಿಯುತ್ತಿದ್ದು, ತಿಂಗಳಿಗೆ ಸರಿಯಾಗಿ ಸಂಬಳ ಸಿಗುವುದಿಲ್ಲ. ಹೀಗಾಗಿ, ಇಲ್ಲಿಗೆ ಚಿಕಿತ್ಸೆಗೆ ಬರುವ ರೋಗಿಗಳ ಸಿಬ್ಬಂದಿ ಬಳಿ ಹಣ ಕೀಳುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

Last Updated : Jun 9, 2022, 11:38 AM IST

ABOUT THE AUTHOR

...view details