ಕರ್ನಾಟಕ

karnataka

ETV Bharat / bharat

ಬಿಹಾರದ ಮುಸ್ಲಿಂ ಕುಟುಂಬಗಳಿಂದ 10 ಸಾವಿರ ರಾಷ್ಟ್ರಧ್ವಜ ತಯಾರಿ.. ದಶಕಗಳಿಂದ ದೇಶ ಸೇವೆ

ಬಿಹಾರದ ಮುಸ್ಲಿಂ ಕುಟುಂಬಗಳಿಂದ ದೇಶ ಸೇವೆ - ರಾಷ್ಟ್ರಧ್ವಜ ಹೊಲಿಯುವ ಕೆಲಸ - 10 ಸಾವಿರಕ್ಕೂ ಅಧಿಕ ತ್ರಿವರ್ಣ ಧ್ವಜ ಸಿದ್ಧತೆ- ಮುಸ್ಲಿಂ ಕುಟುಂಬಗಳು ದಶಕಗಳಿಂದ ಸೇವೆಯಲ್ಲಿ ನಿರತ

tricolours-for-r-day
ಬಿಹಾರದ ಮುಸ್ಲಿಂ ಕುಟುಂಬಗಳಿಂದ 10 ಸಾವಿರ ರಾಷ್ಟ್ರಧ್ವಜ ತಯಾರಿ

By

Published : Jan 21, 2023, 1:22 PM IST

Updated : Jan 21, 2023, 1:53 PM IST

ಬಿಹಾರದ ಮುಸ್ಲಿಂ ಕುಟುಂಬಗಳಿಂದ 10 ಸಾವಿರ ರಾಷ್ಟ್ರಧ್ವಜ ತಯಾರಿ

ಗಯಾ (ಬಿಹಾರ):ಭಾರತ ಜಾತ್ಯತೀತ ರಾಷ್ಟ್ರ. ಕೋಮುಗಲಭೆ, ಭಿನ್ನಮತವಿದ್ದರೂ ವಿವಿಧತೆಯಲ್ಲಿ ಏಕತೆಯಲ್ಲಿ ಸಾರುವ ನಾಡು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬಿಹಾರದ ಮುಸ್ಲಿಂ ಕುಟುಂಬಗಳು 10 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜಗಳನ್ನು ತಯಾರಿಸುತ್ತಿದ್ದಾರೆ. ಇನ್ನೈದು ದಿನಗಳಲ್ಲಿ ಗಣರಾಜ್ಯೋತ್ಸವದಂದು ಹಾರಾಡುವ ತಿರಂಗವನ್ನು ಈ ಕುಟುಂಬಗಳೇ ಸಿದ್ಧಪಡಿಸುತ್ತಿವೆ.

ಬಿಹಾರದ ಗಯಾದಲ್ಲಿ ಅನೇಕ ಮುಸ್ಲಿಂ ಕುಟುಂಬಗಳು ಸ್ವಾತಂತ್ರ್ಯದ ನಂತರ ರಾಷ್ಟ್ರಧ್ವಜವನ್ನು ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಧ್ವಜವನ್ನು ಹೊಲಿಯುವ ಮತ್ತು ಮುದ್ರಿಸುವ ಕೆಲಸ ಮಾಡುತ್ತಿವೆ. ಪೀಳಿಗೆಯಿಂದ ಪೀಳಿಗೆಗೆ ಈ ಕುಟುಂಬಗಳು ಅವಿಚ್ಛಿನ್ನವಾಗಿ ಈ ಉದಾತ್ತ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಯುವಕರಿಗೆ ತ್ರಿವರ್ಣ ಧ್ವಜವನ್ನು ಹೊಲಿಯಲು ತರಬೇತಿಯನ್ನೂ ನೀಡುತ್ತಾರೆ. ಗಯಾದಲ್ಲಿ ರಾಷ್ಟ್ರಧ್ವಜ ರೂಪಿಸುವ ಕೆಲವು ಮುಸ್ಲಿಂ ಕುಶಲಕರ್ಮಿಗಳೊಂದಿಗೆ ಈಟಿವಿ ಭಾರತ್ ಸಂವಾದ ನಡೆಸಿತು. ಅವರು ತ್ರಿವರ್ಣ ಧ್ವಜದ ತಯಾರಿಕೆಯ ಅನುಭವವನ್ನು ಹಂಚಿಕೊಂಡರು.

ದೇಶದ ಕೀರ್ತಿ ಪತಾಕೆಯಂತಿರುವ ರಾಷ್ಟ್ರಧ್ವಜವನ್ನು ರೂಪಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. 40 ವರ್ಷಗಳಿಂದ ನಾವು ತ್ರಿವರ್ಣ ಧ್ವಜಗಳನ್ನು ಹೊಲಿಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಗಯಾದ ಮನ್‌ಪುರದ ನಿವಾಸಿ ಮುಹಮ್ಮದ್ ಗುಲಾಮ್ ಮುಸ್ತಫಾ ತಿಳಿಸಿದ್ದಾರೆ.

ಆದಾಯ ಮುಖ್ಯವಲ್ಲ ಇದು ದೇಶ ಸೇವೆಯ ಭಾಗ:ಮುಸ್ತಫಾ ಅವರು ಮಾನ್ಪುರದ ಖಾದಿ ಗ್ರಾಮ ಉದ್ಯೋಗ ಕೇಂದ್ರದಲ್ಲಿ ಕೆಲಸ ಮಾಡುತ್ತಾರೆ. ಅವರು ಇಲ್ಲಿ ಅತ್ಯುತ್ತಮ ಹೊಲಿಗೆ ಮತ್ತು ಕಟಿಂಗ್​ನಲ್ಲಿ ಪರಿಣತಿ ಸಾಧಿಸಿದ್ದಾರೆ. ಖಾದಿ ಗ್ರಾಮ ಉದ್ಯೋಗದಲ್ಲಿ ಮಾಡಿದ ತ್ರಿವರ್ಣ ಧ್ವಜಗಳು ಸುತ್ತಲಿನ ಐದು ಜಿಲ್ಲೆಗಳಿಗೂ ತಲುಪುತ್ತವೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಮತ್ತು ಜನವರಿ 26 ರ ಗಣರಾಜ್ಯೋತ್ಸವದಂದು ಮಾಡಿದ ಧ್ವಜಗಳ ಸಂಖ್ಯೆಯ ಆಧಾರದ ಮೇಲೆ ವೇತನ ಸಿಗಲಿದೆ. ದಿನದ ಆದಾಯ 500 ರಿಂದ 600 ರೂ. ಇರಲಿದೆ. 40 ವರ್ಷಗಳ ದುಡಿಮೆಯಲ್ಲಿ ಯಾವತ್ತೂ ತಾವು ಹಣಕ್ಕಾಗಿ ಈ ಕೆಲಸ ಮಾಡಿಲ್ಲ. ಕೆಲಸದಲ್ಲಿ ತಮಗೆ ಬರುವ ಹಣಕ್ಕೆ ಹೋಲಿಸಿದರೆ ದೇಶ ಸೇವೆ, ಕರ್ತವ್ಯ ತಮಗೆ ಹೆಚ್ಚಿನ ಸಂತೋಷ, ಸಂತೃಪ್ತಿ ನೀಡಿದೆ ಎನ್ನುತ್ತಾರೆ.

ಗುಲಾಮ್ ಮುಸ್ತಫಾ ಮತ್ತು ಅವರ ಸಂಬಂಧಿಕರು ಒಟ್ಟಾಗಿ ಈ ವರ್ಷ ಗಣರಾಜ್ಯೋತ್ಸವಕ್ಕೆ 10 ಸಾವಿರಕ್ಕೂ ಹೆಚ್ಚು ತ್ರಿವರ್ಣ ಧ್ವಜಗಳನ್ನು ಸಿದ್ಧಪಡಿಸಿದ್ದಾರೆ. ರಾಷ್ಟ್ರಧ್ವಜಗಳ ಜೊತೆಗೆ ಗಾಂಧಿ ಟೋಪಿ, ನೆಹರು ಜಾಕೆಟ್ ಇತ್ಯಾದಿಗಳನ್ನು ತಯಾರಿಸುತ್ತಾರೆ. ಗುಲಾಮ್ ಮುಸ್ತಫಾ ಅವರು ರಾಷ್ಟ್ರಧ್ವಜಗಳನ್ನು ಹೊಲಿಯುವ ಕಲೆಯನ್ನು ತಮ್ಮ ಪುತ್ರ ಮುಹಮ್ಮದ್ ರಾಜಾಗೆ ಕಲಿಸಿಕೊಟ್ಟಿದ್ದಾರೆ.

ವಿವಿಧ ಕುಟುಂಬಗಳಿಂದ ಕರ್ತವ್ಯ:ಮತ್ತೊಬ್ಬ ಕುಶಲಕರ್ಮಿ ಮೊಹಮ್ಮದ್ ಮುಸ್ತಫಾ ಅವರು ಕೂಡ, ರಾಷ್ಟ್ರಧ್ವಜಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 40 ವರ್ಷದ ಮೊಹಮ್ಮದ್ ಮುಸ್ತಫಾ 8 ವರ್ಷಗಳಿಂದ ರಾಷ್ಟ್ರಧ್ವಜಗಳನ್ನು ರೂಪಿಸುತ್ತಿದ್ದಾರೆ. ಮಾನ್ಪುರದ ಖಾದಿ ಗ್ರಾಮ ಉದ್ಯೋಗ ಕೇಂದ್ರದಲ್ಲಿ ಮೂವರು ಮುಸ್ಲಿಂ ಯುವಕರು ಗುಲಾಮ್ ಮುಸ್ತಫಾ ಅವರೊಂದಿಗೆ ತ್ರಿವರ್ಣ ಧ್ವಜಗಳನ್ನು ಹೊಲಿಯುತ್ತಿದ್ದಾರೆ.

ಗಯಾದ ಗಂಜ್ ಮೊಹಲ್ಲಾದ ಸೀಮಾ ಪರ್ವೀನ್ ಅವರ ಕುಟುಂಬವೂ 3 ದಶಕಗಳಿಂದ ರಾಷ್ಟ್ರಧ್ವಜದ ಮೇಲೆ ಅಶೋಕ ಚಕ್ರವನ್ನು ಮುದ್ರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಮೊದಲು ಆಕೆಯ ಮಾವ ಈ ಕೆಲಸ ಮಾಡುತ್ತಿದ್ದರು. ಈಗ ಅವರ ಪತಿ ಮೊಹಮ್ಮದ್ ಶಮೀಮ್ ಮತ್ತು ಅವರ ಮಕ್ಕಳಾದ ಮೊಹಮ್ಮದ್ ಸದ್ದಾಂ, ಮೊಹಮ್ಮದ್ ನವಾಬ್ ಮತ್ತು ಮೊಹಮ್ಮದ್ ಶಾರೀಖ್ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಓದಿ:ಹೈದರಾಬಾದ್​ನ ಗೋಲ್ಡ್​ ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು: ಹೀಗಿದೆ ಇದರ ವಿಶೇಷತೆ...

Last Updated : Jan 21, 2023, 1:53 PM IST

ABOUT THE AUTHOR

...view details